ETV Bharat / state

ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಡಿಸಿ ಸೂಚನೆ

author img

By

Published : Nov 5, 2019, 9:58 PM IST

ರಾಯಚೂರು ನಗರದ ಸೌಂದರ್ಯ ಹಾಗೂ ಸಮಗ್ರ ಅಭಿವೃದ್ಧಿಯ ಕಡೆ ಗಮನಹರಿಸಿ ಸ್ವಚ್ಛತೆ, ನೈರ್ಮಲ್ಯ ಶುದ್ಧ ನೀರು ಸರಬರಾಜು ಮಾಡಬೇಕು ಹಾಗೂ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದರು.

ರಾಯಚೂರು ನಗರಸಭೆಯ ಪ್ರಗತಿ ಪರಿಶೀಲನಾ ಸಭೆ

ರಾಯಚೂರು: ನಗರಸಭೆಯ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳೆಷ್ಟು, ಕಳೆದ ಹಲವಾರು ವರ್ಷಗಳಿಂದ ಬಾಡಿಗೆ ಯಾಕೆ ಬರುತ್ತಿಲ್ಲ ಎಂದು ಡಿಸಿ ಕಂದಾಯ ಅಧಿಕಾರಿಗೆ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅಧಿಕಾರಿ ಮುನಿಸ್ವಾಮಿ, ನಗರಸಭೆಯ ನಗರದಲ್ಲಿ ಒಟ್ಟು 206 ಮಳಿಗೆಗಳಿದ್ದು, ಈ ಪೈಕಿ 99 ಮಳಿಗೆಗಳಿಂದ ಬಾಡಿಗೆ ಪಾವತಿಯಾಗುತ್ತಿದೆ. 107 ಮಳಿಗೆಗಳಿಂದ ಬಾಡಿಗೆ ಬರುತ್ತಿಲ್ಲ. ಅಲ್ಲದೇ ಅನೇಕ ಮಳಿಗೆಗಳು ಖಾಲಿಯಿದ್ದು, ಕೆಲವರಿಂದ ನಿಗದಿತವಾಗಿ ಬಾಡಿಗೆ ಪಾವತಿಯಾಗುತ್ತಿಲ್ಲ ಎಂದು ತಿಳಿಸಿದರು.

ರಾಯಚೂರು ನಗರಸಭೆಯ ಪ್ರಗತಿ ಪರಿಶೀಲನಾ ಸಭೆ

ನಗರಸಭೆಯ ಆದಾಯಕ್ಕೆ ಮೂಲವಾಗಿರುವ ಈ ಮಳಿಗೆಗಳಿಂದ ಕಡ್ಡಾಯವಾಗಿ ಬಾಡಿಗೆ ಪಾವತಿ ಮಾಡಿಕೊಳ್ಳಬೇಕು. ಕೂಡಲೇ ಸಭೆ ಕರೆದು ಬಾಡಿಗೆ ದರ ಪರಿಷ್ಕರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅಲ್ಲದೆ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕಲುಷಿತ ನೀರು ಸರಬರಾಜುವಾಗುವ ದೂರುಗಳಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು. ನಗರದ ಸೌಂದರ್ಯ ಹಾಗೂ ಸಮಗ್ರ ಅಭಿವೃದ್ಧಿಯ ಕಡೆ ಗಮನಹರಿಸಿ ಸ್ವಚ್ಛತೆ, ನೈರ್ಮಲ್ಯ ಶುದ್ಧ ನೀರು ಸರಬರಾಜು ಮಾಡಬೇಕು ಹಾಗೂ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Intro:ನಗರಸಭೆಯ ಸಭಾಂಗಣ ದಲ್ಲಿ ಇಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಅವರ ನೇತೃತ್ವದಲ್ಲಿ ನಗರಸಭೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Body:ಸಭೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳೆಷ್ಟು,ಕಳೆದ ಹಲವಾರು ವರ್ಷಗಳಿಂದ ಬಾಡಿಗೆ ಬರುತ್ತಿಲ್ಲ‌ಏಕೆ ಎಂದು ಕಂದಾಯ ಅಧಿಕಾರಿಗೆ ಕೇಳಿದಾಗ ಡಿಸಿ ಕೇಳಿದಾಗ ಉತ್ತರಿಸಿದ ಅಧಿಕಾರಿ ಮುನಿ ಸ್ವಾಮಿ,ನಗರಸಭೆಯ ನಗರದಲ್ಲಿ ಒಟ್ಟು 206 ಮಳಿಗೆಗಳಿದ್ದು ಈ ಪೈಕಿ 99 ಮಳಿಗೆಗಳಿಂದ ಬಾಡಿಗೆ ಪಾವತಿಯಾಗುತಿದ್ದು 107 ಮಳಿಗೆಗಳಿಂದ ಬರುತ್ತಿಲ್ಲ ಅಲ್ಲದೇ ಎಂದು ಹೇಳಿದಾಗ ಅನೇಕ ಮಳಿಗೆಗಳು ಖಾಲಿಯಿವೆ ಕೆಲವರು ನಿಗದಿತವಾಗಿ ಬಾಡಿಗೆ ಪಾವತಿಯಾಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಡಿಸಿ ವೆಂಕಟೇಶ ಕುಮಾರ ಅವರು ಪ್ರತಿಕ್ರಿಯಿಸಿ ನಗರಸಭೆಯ ಆದಾಯಕ್ಕೆ ಮುಲವಾಗಿರುವ ಈ ಮಳಿಗೆಗಳಿಂದ ಯಾವುದೇ ಕಾರಣಕ್ಕೂ ಬಾಡಿಗೆ ಪಾವತಿಮಾಡಿಕೊಳ್ಳಬೇಕು, ಅಲ್ಲದೇ‌ ಹಳೆಯ ಕಾಲದ ಕಡಿಮೆ ದರ ನಿಹದಿ ಮಾಡಿದ್ದನ್ನು ಕೂಡಲೇ ದರ ಪರಿಷ್ಕರಿಣೆ ಮಾಡಬೇಕು ಇದಕ್ಕೆ ಸಭೆ ಕರೆದು ದರ ಪರಿಷ್ಕರಿಸಿ ಎಂದು ಸೂಚನೆ ನೀಡಿದರು. ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ: ನಗರದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಪರಿಶುದ್ಧ ನೀರು ಬರದೇ ಕಲುಷಿತ ನೀರು ಸರಬರಾಜುವಾಗುವ ದೂರುಗಳಿದ್ದು ಕೂಡಲೇ ಸಮಸ್ಯೆ ಬಗೆಹರಿಸಿ ಶುದ್ಧ ನೀರು ನೀಡಿ ನಾಗರಿಕರ ಆರೋಗ್ಯ ಕಾಪಾಡಲು ಮುಂದಾಗಬೇಕೆಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಕೊಳಾಯಿ(ನಳ) ಸಂಪರ್ಕ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಕರ ವಸೂಲಿ ಸಂಗ್ರಹವಾಗುತ್ತಿಲ್ಲ ಎಂಬುವುದರ ಕಾರಣ ಕೇಳಿ ಕರ ವಸುಲಿ ಸರಿಯಾಗಿ ಮಾಡಬೇಕು ನಳ ಸಂಪರ್ಕ ಪಡೆದವರು ಕರ ಪಾವತಿ ಮಾಡದಿದ್ದಲ್ಲಿ ಸಂಪರ್ಕ ಕಡಿತಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು. ಸಭೆಯ ಆರಂಭದಲ್ಲಿ ಪರಿಸರ ವಿಭಾಗದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು ಪ್ಲಾಸ್ಟಿಕ್ ಮಾರಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಾಳಿ ಮಾಡಿ ಟನ್ ಗಟ್ಟಲೆ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದರು. ಡಿಸಿ ಅವರು ಮಾತನಾಡಿ,ನಗರದ ಸೌಂದರ್ಯ ಹಾಗೂ ಸಮಗ್ರ ಅಭಿವೃದ್ಧಿಯ ಕಡೆ ಗಮನಹರಿಸಿ ಸ್ವಚ್ಛತೆ, ನೈರ್ಮಲ್ಯ ಶುದ್ಧ ನೀರು ಸರಬರಾಜು ಮಾಡಬೇಕು ಹಾಗೂ ಹದಗೆಟ್ಟ ರಸ್ತೆ ದುರಸ್ತಿಗೊಳಿಸಿ ರಸ್ತೆ ಕಾಮಗಾರಿ ಶೀಗ್ರ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು. ನಗರಸಭೆಯ ಸದಸ್ಯರ ಅನುಪಸ್ಥಿತಿ: ಈ ಹಿಂದೆ ನಡೆಯುತಿದ್ದ ನಗರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆ ಸದಸ್ಯರು ಯಾವುದೇ ಚರ್ಚೆಯ ಸಂದರ್ಭದಲ್ಲಿ ಗದ್ದಲ,ಕೋಲಾಹಲ ಮೂಡಿಸುತಿದ್ದರು‌ಹಾಗೂ ನಗರಸಭೆಯ ಸದಸ್ಯರು ಮಾತ್ರವಲ್ಲದೇ ಸಂಬಂಧಿಕರೂ ಪಾಲ್ಗೊಳ್ಳುವ ಮೂಲಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತಿದ್ದರು.‌ಆದ್ರೆ ನಗರಸಭೆಯ ಅಧ್ಯಕ್ಷರ,ಉಪಾಧ್ಯಕ್ಷರ ನೇಮಕದ ಕುರಿತು ಕೋರ್ಟನಲ್ಲಿ‌ ಪ್ರಕರಣ ನಡೆಯಿತ್ತಿರುವ ಹಿನ್ನೆಲೆಯಲ್ಲಿ‌ ನಗರ ಸಭೆ‌ಸದಸ್ಯರ ಬೆಂಬಲಿಗರು ನಗರಸಭೆಯ ಸುತ್ತಮುತ್ತಸುಳಿದಾಡಿದರೂ ಸಭೆಗೆ ಆಗಮಿಸದಂತೆ ಸೂಚನೆ ನೀಡಲಾಗಿತ್ತು ಅಲ್ಲದೇ ನಗರಸಭೆ‌ಸದಸ್ಯರ ಅನುಪಸ್ಥಿತಿ ಎದ್ದು ಕಾಣುತಿತ್ತು‌ ಇದಕ್ಕೆ ಸಭೆಯ ಅರಂಭದಲ್ಲಿಯೇ ಡಿಸಿ ವೆಂಕಟೇಶ ಕುಮಾರ ನಗರಸಭೆ ಸಿಬ್ಬಂದಿ ಹಾಗೂ ಮಾದ್ಯಮ ಪ್ರತಿನಿಧಿಗಳ‌ಹೊರತು ಸದಸ್ಯರು ಯಾರಾದ್ರೂ ಇದ್ದರೆ ಹೊರನಡೆಯಿರಿ ಎಂದು ಹೇಳಿದ್ದು ಗಮನಾರ್ಹ‌ವಾಗಿದೆ. ಸಭೆಯಲ್ಲಿ ಸಹಾಯಕ‌ ಆಯುಕ್ತ ಸಂತೋಷ ಕುಮಾರ ಸೇರಿದಂತೆ ನಗರಸಭೆಯ‌‌ ಅಧಿಕಾರ ಗಳು,ಸಿಬ್ಬಂದಿಗಳು ಹಾಜರಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.