ರಾಯಚೂರು: ಸ್ಥಳೀಯ ಮಟ್ಟದಲ್ಲಿ ಅಧಿಕಾರ ನಡೆಸುವ ಸಂಸ್ಥೆಗಳಿಗೆ ಉನ್ನತ ಹುದ್ದೆ ಖಾಲಿಯಾದ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಆದರೆ ರಾಯಚೂರು ನಗರಸಭೆ ಉನ್ನತಾಧಿಕಾರಿ ಹುದ್ದೆ ಖಾಲಿಯಿದ್ದು, ನಗರವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಸಭೆಯಲ್ಲಿ ಕಟ್ಟಡ ಪರವಾನಿಗೆ, ಆನ್ಲೈನ್ ಖಾತೆ, ಖಾತೆ ನಕಲು ಸೇರಿದಂತೆ ಪ್ರತಿಯೊಂದನ್ನ ಆನ್ಲೈನ್ ಮೂಲಕ ಪಡೆಯಬೇಕು. ಇವುಗಳನ್ನ ನೀಡಬೇಕಾದ್ರೆ, ಪೌರಾಯುಕ್ತರ ತಂಬ್ ಇಂಪ್ರೇಷನ್ ಬೇಕಾಗುತ್ತದೆ. ಆದ್ರೆ ಖಾಯಂ ಆಗಿ ಪೌರಾಯುಕ್ತರನ್ನ ಸರ್ಕಾರ ನಿಯೋಜನೆ ಮಾಡದಿರುವುದರಿಂದ ನಗರವಾಸಿಗಳು ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.
ರಾಯಚೂರು ನಗರಸಭೆಯಲ್ಲಿ, ಈಗಾಗಲೇ ಕಾಲ ಕಾಲಕ್ಕೆ ಸರಿಯಾದ ಕೆಲಸವಾಗಲ್ಲ ಎನ್ನುವ ಆರೋಪವಿದೆ. ಇದರ ಮಧ್ಯ ನಗರಸಭೆಯನ್ನ ಮುನ್ನಡೆಸುವಂತಹ ಖಾಯಂ ಅಧಿಕಾರಿಯಿಲ್ಲದೇ ಹಲವು ಕಡತಗಳು, ಅಭಿವೃದ್ದಿ ಯೋಜನೆಗಳು, ಅನುಷ್ಠಾನಗೊಳಬೇಕಾದ ಕಾರ್ಯಗಳು ಸೂಕ್ತ ಸಮಯದಲ್ಲಿ ಆಗದೆ ನೆನಗುದ್ದಿಗೆ ಬಿಳುತ್ತಿವೆ.
ಪೌರಾಯುಕ್ತರ ವರ್ಗಾವಣೆಗೊಂಡ ಬಳಿಕ ರಾಯಚೂರು ಸಹಾಯಕರನ್ನ ತಾತ್ಕಾಲಿಕವಾಗಿ ಪ್ರಭಾರಿ ಪೌರಾಯುಕ್ತರಾಗಿ ನಿಯೋಜಿಸಲಾಗಿತ್ತು. ಆದ್ರೆ ಪ್ರವಾಹ ಸೇರಿದಂತೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿರುವ ಅಧಿಕಾರಿಯನ್ನ ನಿಯೋಜಿಸಲಾಗಿದೆ. ಇದರಿಂದ ಎರಡು ಕಡೆ ಕೆಲಸವನ್ನ ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಸರ್ಕಾರ ರಾಯಚೂರು ನಗರಸಭೆಗೆ ಖಾಯಂ ಪೌರಾಯುಕ್ತರನ್ನ ನಿಯೋಜಿಸುವಂತೆ ನಗರವಾಸಿಗಳು ಒತ್ತಾಯಿಸಿದ್ದಾರೆ.