ETV Bharat / state

ರಾಯಚೂರು: ಪ್ರಾಥಮಿಕ‌ ಶಾಲಾ‌ ಶಿಕ್ಷಕರ ಸಂಘದ ಚುನಾವಣೆಗೆ ಬಿರುಸಿನ ಮತದಾನ

ರಾಯಚೂರು ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಗರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.

ಮತದಾನ
ಮತದಾನ
author img

By

Published : Dec 15, 2020, 2:19 PM IST

ರಾಯಚೂರು: ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಗರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ನಗರದ ಸೀತಾ ಸುಬ್ಬರಾವ್ ಸ್ಮಾರಕ ಮಹಾವಿದ್ಯಾಲಯ ಕಾಲೇಜಿನಲ್ಲಿ ನಾಲ್ಕು ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮಧ್ಯಾಹ್ನದ ವೇಳೆಗೆ ಶೇ 35ರಷ್ಟು ಮತದಾನ ಮುಗಿದಿದೆ.

ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ 28 ಸ್ಥಾನಗಳಿಗೆ ಶಿಕ್ಷಕರಲ್ಲಿ ಎರಡು ಬಣದಿಂದ 51 ಜನ ಸ್ಪರ್ಧಿಸಿದ್ದಾರೆ. ಸಾಮಾನ್ಯ ವಿಭಾಗದ 19 ಸ್ಥಾನಗಳಿಗೆ, 41 ಜನ ಸ್ಪರ್ಧಿಸಿದರೆ ಮಹಿಳಾ ವಿಭಾಗದ 9 ಸ್ಥಾನಗಳಿಗೆ 15 ಜನ ಸ್ಪರ್ಧಿಸಿದ್ದಾರೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಇದಾದ ಬಳಿಕ ಮತ ಎಣಿಕೆ ನಡೆಯಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.

ಪ್ರಾಥಮಿಕ‌ ಶಾಲಾ‌ ಶಿಕ್ಷಕರ ಸಂಘದ ಚುನಾವಣೆಗೆ ಬಿರುಸಿನ ಮತದಾನ

ಕೊರೊನಾ ಭೀತಿ ಹಿನ್ನೆಲೆ ಮತದಾನದ ವೇಳೆ ಸರತಿ ಸಾಲಿನಲ್ಲಿ ಶಿಸ್ತು, ಸಂಯಮದ ಮತದಾನ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಪರಸ್ಪರ ಅಂತರ ಕಾಯ್ದುಕೊಳ್ಳದೆ, ಶಿಸ್ತು ಇಲ್ಲದೆ ಇರುವುದು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.