ETV Bharat / state

ನಿವೃತ್ತಿ ಬಳಿಕ ಸಿಗುತ್ತಿಲ್ಲ ಸರ್ಕಾರಿ ಜಮೀನು... ರಾಯಚೂರು ಮಾಜಿ ಸೈನಿಕರ ಅಳಲು - land from Government

ಯೋಧರಿಗೆ ನಿವೃತ್ತಿ ಬಳಿಕ ವ್ಯವಸಾಯ ಮಾಡಲು ಜಮೀನು ಒದಗಿಸಬೇಕು ಎಂಬ ನಿಯಮವಿದೆ. ಆ ನಿಯಮದ ಪ್ರಕಾರ ಆಯಾ ಜಿಲ್ಲೆಯ ಮಾಜಿ ಯೋಧರು ಜಿಲ್ಲಾಡಳಿತಕ್ಕೆ ಭೂಮಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಮಾಜಿ ಯೋಧರಿಂದ ಸಲ್ಲಿಸಿದ ಅರ್ಜಿಗಳನ್ನ ಪರಿಶೀಲಿಸಿ, ಸರ್ಕಾರ ಜಮೀನು ಒದಗಿಸುವ ಕೆಲಸ ಮಾಡಬೇಕು. ಆದರೆ ರಾಯಚೂರು ಜಿಲ್ಲೆಯಲ್ಲಿ ಆ ಕೆಲಸ ಆಗುತ್ತಿಲ್ಲ ಎಂದು ಮಾಜಿ ಯೋಧರು ಆರೋಪಿಸಿದ್ದಾರೆ.

ರಾಯಚೂರು ಮಾಜಿ ಸೈನಿಕರ ಅಳಲು
author img

By

Published : Jul 29, 2019, 9:04 PM IST

ರಾಯಚೂರು: ದೇಶ ಸೇವೆಯೇ ಈಶ ಸೇವೆಯೆಂದು ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ದೇಶ ಕಾಯುವ ಕಾಯಕ ಮಾಡುತ್ತಾರೆ. ದೇಶ ಸೇವೆ ಮಾಡಿ ನಿವೃತ್ತಿ ಬಳಿಕ ಮಾಜಿ ಸೈನಿಕರಿಗೆ ನೀಡಬೇಕಾದ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ನಿವೃತ್ತಿ ಬಳಿಕ ಸೈನಿಕರಿಗೆ ವ್ಯವಸಾಯಕ್ಕಾಗಿ ಒದಗಿಸಬೇಕಾದ ಜಮೀನು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಯೋಧರಿಗೆ ನಿವೃತ್ತಿ ಬಳಿಕ ವ್ಯವಸಾಯ ಮಾಡಲು ಜಮೀನು ಒದಗಿಸಬೇಕು ಎಂಬ ನಿಯಮವಿದೆ. ಆ ನಿಯಮದ ಪ್ರಕಾರ ಆಯಾ ಜಿಲ್ಲೆಯ ಮಾಜಿ ಯೋಧರು ಜಿಲ್ಲಾಡಳಿತಕ್ಕೆ ಭೂಮಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಮಾಜಿ ಯೋಧರಿಂದ ಸಲ್ಲಿಸಿದ ಅರ್ಜಿಗಳನ್ನ ಪರಿಶೀಲಿಸಿ, ಸರ್ಕಾರ ಜಮೀನು ಒದಗಿಸುವ ಕೆಲಸ ಮಾಡಬೇಕು. ಆದರೆ ರಾಯಚೂರು ಜಿಲ್ಲೆಯಲ್ಲಿ ಆ ಕೆಲಸ ಆಗುತ್ತಿಲ್ಲ ಎಂದು ಮಾಜಿ ಯೋಧರು ಆರೋಪಿಸಿದ್ದಾರೆ.

ಇನ್ನು ರಾಯಚೂರು ಜಿಲ್ಲೆಯಲ್ಲಿ 180ಕ್ಕೂ ಹೆಚ್ಚು ಜನ ಮಾಜಿ ಯೋಧರಿದ್ದಾರೆ. ಇವರಲ್ಲಿ ಹಲವು ಜನ ಜಿಲ್ಲಾಡಳಿತಕ್ಕೆ ಭೂಮಿಗಾಗಿ ಅರ್ಜಿಯನ್ನ ಸಲ್ಲಿಸಿದ್ದಾರೆ. ಅರ್ಜಿಯನ್ನ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಬಳಿಕ ಜಿಲ್ಲೆಯಲ್ಲಿ ಎಲ್ಲಿಯಾದರೂ ಸರ್ಕಾರಿ ಜಮೀನು ಲಭ್ಯವಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ನೀಡಬೇಕು. ಆದ್ರೆ ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ಹಿಂದೆ ಕೆಲ ಮಾಜಿ ಸೈನಿಕರಿಗೆ ಹಂಚಿಕೆ ಮಾಡಿರುವುದು ಹೊರತುಪಡಿಸಿ, ಮತ್ತೆ ಯಾರಿಗೂ ನೀಡಿಲ್ಲ. ಜಮೀನಿಗಾಗಿ ಅರ್ಜಿ ಸಲ್ಲಿಸಿ ಸಾಕಷ್ಟು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿರೂ ಈಗ ನೀಡುತ್ತೇವೆ, ಆಗ ನೀಡುತ್ತೇವೆ ಎನ್ನುವ ಭರವಸೆ ನೀಡುತ್ತಾರೆಯೇ ಹೊರತು ಯಾವುದೇ ಭೂಮಿ ಹಂಚಿಕೆ ಮಾಡಿಲ್ಲ. ಭೂಮಿಗಾಗಿ ಅರ್ಜಿ ಸಲ್ಲಿಸಿದ ಕೆಲವರು ಮೃತಪಟ್ಟಿದ್ದಾರೆ. ಇರುವ ಮಾಜಿ ಸೈನಿಕರು ಅರ್ಜಿ ನೀಡಿದ್ದರೂ ಭೂಮಿ ಹಂಚಿಕೆ ಮಾಡುತ್ತಿಲ್ಲ ಅಂತಾರೆ ಮಾಜಿ ಯೋಧರು.

ರಾಯಚೂರು ಮಾಜಿ ಸೈನಿಕರ ಅಳಲು

ನಮ್ಮ ರಾಜ್ಯಕ್ಕೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿನ ನಿವೃತ್ತ ಯೋಧರಿಗೆ ಸರಿಯಾಗಿ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಈ ನಡೆಯಿಂದ ಬೇಸತ್ತು ಕೆಲ ಮಾಜಿ ಯೋಧರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಈ ದೂರಿನ ಆಧಾರದ ಮೇಲೆ 2019 ಫೆಬ್ರುವರಿ 16ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಯಚೂರು ಜಿಲ್ಲೆ ಸೇರಿದಂತೆ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಚಿತವಾಗಿ ಭೂಮಿ ನೀಡುವಂತೆ ಆದೇಶ ಮಾಡಲಾಗಿದೆ. ಆದರೂ ಕೂಡ ಅರ್ಜಿ ಸಲ್ಲಿಸಿದ ಮಾಜಿ ಯೋಧರಿಗೆ ಉಚಿತ ಭೂಮಿ ಹಂಚಿಕೆ ಮಾಡಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ನಮಗೆ ಉಚಿತವಾಗಿ ಭೂಮಿ ಹಂಚಿಕೆ ಮಾಡುವಂತೆ ಮಾಜಿ ಯೋಧರು ಒತ್ತಾಯ ಮಾಡಿದ್ದು, ಇದಕ್ಕೆ ನೂತನ ಬಿಜೆಪಿ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

Intro:ಸ್ಲಗ್: ಮಾಜಿ ಸಿಫಾಯಿ ನೀಡುವುದಕ್ಕಿಲ್ಲ, ಭೂಮಿ!
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-೦7-2019
ಸ್ಥಳ: ರಾಯಚೂರು
ಆಂಕರ್: ದೇಶ ಸೇವೆ ಈಶ ಸೇವೆಯೆಂದು, ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣದ ಹಂಗನ್ನು ತೋರೆದು ದೇಶ ಕಾಯುವ ಕಾಯಕ ಮಾಡುತ್ತಾರೆ. ದೇಶ ಸೇವೆ ಮಾಡಿ ನಿವೃತ್ತಿ ಬಳಿಕ ಸರಕಾರದಿಂದ ಮಾಜಿ ಸೈನಿಕರ ನೀಡಬೇಕಾದ ಸೌಲಭ್ಯಗಳನ್ನ ಒದಗಿಸುವುದು ಸರಕಾರ ಜವಾಬ್ದಾರಿ. ಆದ್ರೆ ನಿವೃತ್ತಿ ಬಳಿಕ ಸೈನಿಕರಿಗೆ ವ್ಯವಸಾಯಕ್ಕಾಗಿ ಒದಗಿಸಬೇಕಾದ ಜಮೀನನ್ನು ನೀಡಿದೆ, ಮಾಜಿ ಸೈನಿಕರಿಗೆ ಅರ್ಜಿಗೆ ಕ್ಯಾರಿ ಎನ್ನುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರು ದೇಶದ ಭದ್ರತೆ ವಿಚಾರ ಬಂದಾಗ ತಮ್ಮ ಪ್ರಾಣದ ಹಂಗು ತೊರೆದು, ದೇಶ ಸೇವೆ ಸನ್ನದ್ದರಾಗಿರುತ್ತಾರೆ. ಇಂತಹ ಸೇವೆ ಮುಗಿದ ನಿವೃತ್ತಿ ಹೊಂದಿದ್ದ ವಾಪಾಸ್ ಸ್ವಗ್ರಾಮಕ್ಕೆ ಬರುತ್ತಾರೆ. ಇರುವಷ್ಟು ದಿನಗಳ ಕಾಲ ದೇಶದ ಗಡಿಯಲ್ಲಿ ಕೆಲಸ ಮಾಡಿದ್ದಾಗ ಆಸ್ತಿಪಾಸ್ತಿ ಮಾಡುವುದಕ್ಕಿಂತ ದೇಶದ ಭದ್ರತೆ ಒದಗಿಸುತ್ತಾರೆ. ಹೀಗಾಗಿ ಸರಕಾರ ಯೋಧರಿಗೆ ನಿವೃತ್ತಿ ಬಳಿಕ ಅವರಿಗೆ ವ್ಯವಸಾಯ ಮಾಡುವುದಕ್ಕೆ ಜಮೀನು ಒದಗಿಸಬೇಕು ಎನ್ನುವ ನಿಯಮವಿದೆ. ಅ ನಿಯಮದ ಪ್ರಕಾರ ಆಯಾ ಜಿಲ್ಲೆಯ ಇರುವ ಮಾಜಿ ಯೋಧರು ಜಿಲ್ಲಾಡಳಿತಕ್ಕೆ ಭೂಮಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಮಾಜಿ ಯೋಧರಿಂದ ಸಲ್ಲಿಸಿದ ಅರ್ಜಿಗಳನ್ನ ಪರಿಶೀಲಿಸಿ, ಸರಕಾರ ಜಮೀನು ಒದಗಿಸುವ ಕೆಲಸವನ್ನ ಮಾಡಬೇಕು. ಆದ್ರೆ ರಾಯಚೂರು ಜಿಲ್ಲೆಯಲ್ಲಿ ಮಾಜಿ ಯೋಧರಿಗೆ ವ್ಯವಸಾಯಕ್ಕೆ ಭೂಮಿ ನೀಡುತ್ತಿಲ್ಲ ಎನ್ನುತ್ತಿದ್ದಾರೆ ಮಾಜಿ ಯೋಧರು.
ವಾಯ್ಸ್ ಓವರ್.2: ಇನ್ನು ರಾಯಚೂರು ಜಿಲ್ಲೆಯಲ್ಲಿ 180ಕ್ಕೂ ಹೆಚ್ಚು ಜನ ಮಾಜಿ ಯೋಧರು ಇದ್ದಾರೆ. ಇವರಲ್ಲಿ ಹಲವು ಜನ ಜಿಲ್ಲಾಡಳಿತಕ್ಕೆ ಭೂಮಿಗಾಗಿ ಅರ್ಜಿಯನ್ನ ಸಲ್ಲಿಸಿದ್ದಾರೆ. ಅರ್ಜಿಯನ್ನ ಆಧಾರಿಸಿದ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಬಳಿಕ ಜಿಲ್ಲೆಯಲ್ಲಿ ಎಲ್ಲಿಯಾದರೂ ಸರಕಾರಿ ಜಮೀನು ಲಭ್ಯವಿದ್ದಾರೆ. ಸರಕಾರ ನಿಯಮಗಳ ಪ್ರಕಾರ ನೀಡಬೇಕು. ಆದ್ರೆ ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ಹಿಂದೆ ಕೆಲ ಮಾಜಿ ಸೈನಿಕರಿಗೆ ಹಂಚಿಕೆ ಮಾಡಿರುವುದು ಹೊರತು ಪಡಿಸಿದ್ದಾರೆ, ಮತ್ತೆಯಾರಿಗೂ ನೀಡಿಲ್ಲ. ಜಮೀನಿಗಾಗಿ ಅರ್ಜಿ ಸಲ್ಲಿಸಿ ಸಾಕಷ್ಟು ಬಾರಿ ಸರಕಾರಿಗಳಿಗೆ ಅಲೆದಾಡಲಾಗಿದೆ. ಈಗ ನೀಡುತ್ತೇವೆ, ಆಗ ನೀಡುತ್ತೇವೆ ಎನ್ನುವ ಭರವಸೆ ನೀಡುತ್ತಾರೆ ಹೊರತು ಮಾಜಿ ಯೋಧರಿಗೆ ಸ್ಪಂದಿಸದೆ, ಯಾವುದೇ ಭೂಮಿ ಹಂಚಿಕೆ ಮಾಡಿಲ್ಲ. ಭೂಮಿಗಾಗಿ ಅರ್ಜಿ ಸಲ್ಲಿಸಿದ್ರು, ಕೆಲವರು ಮೃತಪಟ್ಟಿದ್ದಾರೆ, ಇರುವ ಮಾಜಿ ಸೈನಿಕರು ಅರ್ಜಿ ನೀಡಿದ್ದರು, ಭೂಮಿ ಹಂಚಿಕೆ ಮಾಡುತ್ತಿಲ್ಲ ಅಂತಾರೆ ಮಾಜಿ ಯೋಧರು.
ವಾಯ್ಸ್ ಓವರ್.3: ನಮ್ಮ ರಾಜ್ಯದಲ್ಲಿ ಸರಿಯಾಗಿ ಮಾಜಿ ಯೋಧರಿಗೆ ಭೂಮಿ ಹಂಚಿಕೆ ಮಾಡುತ್ತಿಲ್ಲ. ಬೇರೆ ರಾಜ್ಯಗಳಲ್ಲಿನ ನಿವೃತ್ತ ಯೋಧರಿಗೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯ ಸರಕಾರದ ಈ ನಡೆಯಿಂದ ಬೇಸತ್ತು ಕೆಲ ಮಾಜಿ ಯೋಧರಿಗೆ ಲೋಕಾಯುಕ್ತ ದೂರು ಸಲ್ಲಿಸಲಾಗಿದೆ. ಈ ದೂರಿನ ಆಧಾರದ ಮೇಲೆ 2019 ಫೆಬವರಿ 16ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಯಚೂರು ಜಿಲ್ಲೆ ಸೇರಿದಂತೆ 15 ಜಿಲ್ಲೆಗಳ ಜಿಲ್ಲಾಧಿಕಾರಿ ಉಚಿತವಾಗಿ ಭೂಮಿ ನೀಡುವಂತೆ ಆದೇಶ ಮಾಡಲಾಗಿದೆ. ಆದ್ರೂ ಅರ್ಜಿ ಸಲ್ಲಿಸಿದ ಮಾಜಿ ಯೋಧರಿಗೆ ಉಚಿತ ಭೂಮಿ ಹಂಚಿಕೆ ಮಾಡಿಲ್ಲ. ಇನ್ನಾದರೂ ರಾಜ್ಯ ಸರಕಾರ ನಮ್ಮಗೆ ಉಚಿತವಾಗಿ ಭೂಮಿ ಹಂಚಿಕೆ ಮಾಡುವಂತೆ ಮಾಜಿ ಯೋಧರು ಒತ್ತಾಸೆ ಮಾಡಿದ್ದು, ಇದಕ್ಕೆ ನೂತನ ಸರಕಾರ ಯಾವ ರೀತಿ ಸ್ಪಂದನೆ ಮಾಡುತ್ತದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
Conclusion:ಬೈಟ್.1: ಸುಂದರಸಿಂಗ್, ಜಿಲ್ಲಾಧ್ಯಕ್ಷ, ಮಾಜಿ ಸೈನಿಕರ ಸಂಘಟನೆ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.