ರಾಯಚೂರು : ಬಾಲ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸುವ ವಿಚಾರಕ್ಕೆ ಗಲಾಟೆ ನಡೆದು, ಕೆಲವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಎಲ್‌ಬಿಎಸ್ ನಗರದಲ್ಲಿ ನಡೆದಿದೆ.
ದೇವಾಲಯದ ಬಳಿಯ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಜನರ ಅನುಕೂಲಕ್ಕೆ ಮಂದಿರದ ಆವರಣದಲ್ಲಿ ಲಭ್ಯವಿರುವ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಎಸ್ಟಿಮೇಟ್ ತಯಾರಿಸಲು ಕೆಲವರು ನಿರ್ಧರಿಸಿದ್ದರು. ಈ ವಿಷಯ ತಿಳಿದು ಓರ್ವ ವ್ಯಕ್ತಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾಗಿ ಹೇಳಲಾಗಿದೆ.
ಇಂದು ದೇವಾಲಯಕ್ಕೆ ಭಕ್ತರು ಆಗಮಿಸಿದ ಸಂದರ್ಭ ಬೀಗ ಹಾಕಿರುವುದು ಗೊತ್ತಾಗಿದೆ. ಈ ಬಗ್ಗೆ ಇಲ್ಲಿನ ನಗರಸಭೆ ಸದಸ್ಯ ಸೇರಿದಂತೆ ಸ್ಥಳೀಯರು ಬೀಗ ಹಾಕಿರುವವರ ಕುರಿತು ವಿಚಾರಿಸಿದಾಗ, ಓಂಕಾರ ಎನ್ನುವವರು ಬೀಗ ಹಾಕಿದ್ದಾರೆ ಗೊತ್ತಾಗಿದೆ. ಬಳಿಕ ಅವರನ್ನು ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು, ಈ ಸಂದರ್ಭ ಓಂಕಾರ ಹಾಗೂ ಜಗದೀಶ್ ಎನ್ನುವ ಮಧ್ಯ ಮಾತಿನ ಚಕಮಕಿ ನಡೆದಿದೆ. ಆದರೆ, ಪರಿಸ್ಥಿತಿ ವಿಕೋಪ ತೆರಳಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಲಕ್ಷ ದೀಪೋತ್ಸವ, ತುಂಗಾರತಿ ಸಂಭ್ರಮ