ETV Bharat / state

ಎಂಎಲ್​​ಸಿ​​​​ ಟಿಕೆಟ್ ನೀಡುವಂತೆ ಬಿಜೆಪಿಗೆ ಪ್ರತಾಪ್​ಗೌಡ ಪಾಟೀಲ್​ ಮನವಿ​​ - Ex mla pratap gowda patl

ನಮ್ಮಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ರಾಜೀನಾಮೆ ನೀಡಿದಾಗ, ನಮಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಅದರಂತೆ ಪಕ್ಷ ನಡೆದುಕೊಳ್ಳುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಪ್ರತಾಪ್​ ಗೌಡ ಪಾಟೀಲ್​ ಹೇಳಿದರು.

Pratap Gowda Patil
ಪ್ರತಾಪ್‌ ‌ಗೌಡ ಪಾಟೀಲ್, ಮಾಜಿ ಶಾಸಕ
author img

By

Published : Jun 12, 2020, 11:20 PM IST

ರಾಯಚೂರು: ನಮ್ಮಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದು, ನಮಗೆ ವಿಧಾನ ಪರಿಷತ್​​​​ ಚುನಾವಣೆಗೆ ಟಿಕೆಟ್ ನೀಡುವಂತೆ ಹೈಕಮಾಂಡ್​​​ಗೆ ಮನವಿ ಮಾಡಲಾಗಿದೆ ಎಂದು ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್​​ ಹೇಳಿದರು.

ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜೀನಾಮೆ ನೀಡಿದಾಗ, ನಮಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ನೀಡಿದ ಭರವಸೆಯಂತೆ ಪರಿಷತ್‌ಗೆ ಸದಸ್ಯನನ್ನಾಗಿ ಮಾಡಿ, ಸಚಿವ ಸ್ಥಾನ ನೀಡಬೇಕು ಎಂದರು.

ಪ್ರತಾಪ್​ಗೌಡ ಪಾಟೀಲ್​​​

ಮಸ್ಕಿ ಕ್ಷೇತದ ವಿಧಾನಸಭಾ ಚುನಾವಣೆ ತಕರಾರು ಅರ್ಜಿ ಹೈಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡ ಬಳಿಕ ಪರಿಷತ್​​​​ನಲ್ಲಿ ರಾಜೀನಾಮೆ ಪಡೆದುಕೊಳ್ಳಲಿ ಎಂದ ಅವರು, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.

ನಾವು ಹೈಕಮಾಂಡ್ ಬಳಿ ವಿನಂತಿ ಮಾಡಿದ್ದೇವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ಹಿರಿಯ ಮುಖಂಡರ ಗಮನಕ್ಕೂ ತರಲಾಗಿದೆ. ಬಿಜೆಪಿಯಿಂದ ಪರಿಷತ್ ಸ್ಥಾನಕ್ಕೆ ಪರಿಗಣಿಸಿದರೆ ಸಂತೋಷವಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.