ETV Bharat / state

ರಾಜ್ಯದಲ್ಲಿ ಕಾಂಗ್ರೆಸ್​​​​ ಅಧಿಕಾರಕ್ಕೆ ತಂದರೆ ತಾಲಿಬಾನ್ ಮಾದರಿ ಸರ್ಕಾರ ಬಂದಂತೆ: ಪ್ರತಾಪ್ ಸಿಂಹ - etv bharat kannada

ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಅಭ್ಯರ್ಥಿ ಕನಿಷ್ಠ 45 ಕ್ಷೇತ್ರ ಗೆಲ್ಲಿಸಬೇಕು. ಆದರೆ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವುದೇ ಅನುಮಾನವಿದೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

pratap-singh-reaction-on-congress
ರಾಜ್ಯದಲ್ಲಿ ಕಾಂಗ್ರೆಸ್​ನ್ನು ಅಧಿಕಾರಕ್ಕೆ ತಂದರೆ ತಾಲಿಬಾನ್ ಮಾದರಿ ಸರ್ಕಾರ ಬಂದಂತೆ: ಪ್ರತಾಪ್ ಸಿಂಹ
author img

By

Published : May 5, 2023, 4:31 PM IST

ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್​ನ್ನು ಅಧಿಕಾರಕ್ಕೆ ತಂದರೆ ಒಸಾಮ ಬಿನ್ ಲಾಡೆನ್, ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಮಾದರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಹೊರತು ಕನ್ನಡಿಗರ ಸರ್ಕಾರ ಬರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಬೆಟ್ಟವನ್ನ ಡಿ ಕೆ ಶಿವಕುಮಾರ್​ ಏಸು ಬೆಟ್ಟ ಮಾಡಲು ಹೋಗಿದ್ದರು, ಟಿಪ್ಪು ಹುಟ್ಟಿನ ಬಗ್ಗೆ ಸಿದ್ದರಾಮಯ್ಯ ಕುಂಡಲಿ ಬರೆಯುತ್ತಾರೆ, ಆಂಜನೇಯನ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್​ನವರು ಮುಸ್ಲಿಂರಿಗೆ ಅಕ್ರಮವಾಗಿ ಕೊಟ್ಟ 4% ಮೀಸಲಾತಿಯನ್ನು ವಾಪಸ್ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತು ಅವರಿಗೆ ಕೊಡ್ತಾರೆ, ಗೋ ಹತ್ಯೆ ಮಾಡುವವರಿಗೆ ಮೀಸಲಾತಿ ಕೊಡ್ತಾರಂತೆ ಎಂದು ವಾಗ್ದಾಳಿ ನಡೆಸಿದರು. ಸದ್ಯ ಮಾಜಿ ಸಿದ್ದರಾಮಯ್ಯ ಕತೆ ಏನಾಗಿದೆ ಅಂದ್ರೆ, 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಹೇಳುತ್ತಿದ್ದಾರೆ. ನಾಮಿನೆಷನ್ ಅದ‌ ಮೇಲೆ ಮತದಾನಕ್ಕೆ ಮತ್ತೆ ತಮ್ಮ ಕ್ಷೇತ್ರಕ್ಕೆ ಬರ್ತಿನಿ ಅಂದೋರು, ಸೋಮಣ್ಣ ಸ್ಪರ್ಧಿಸಿದ್ದಕ್ಕೆ ಮರುದಿನವೇ ವರುಣಕ್ಕೆ ಬಂದ್ರು, ಮತದಾನಕ್ಕೆ ಐದು ದಿನ ಬಾಕಿ ಇರುವಾಗ ಈಗ ಮೈಸೂರಿಗೆ ಬಂದಿದ್ದಾರೆ ಎಂದರು.

ಕಾಂಗ್ರೆಸ್ ಅಂದ್ರೆ ಪ್ರಾಣಿ ಪಕ್ಷಿಗಳಿಗೂ ಇಷ್ಟವಿಲ್ಲ- ಪ್ರತಾಪ್​ ಸಿಂಹ: ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಅಭ್ಯರ್ಥಿ ಕನಿಷ್ಠ 45 ಕ್ಷೇತ್ರ ಗೆಲ್ಲಿಸಬೇಕು. ಆದರೆ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವುದೇ ಅನುಮಾನವಿದೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ಬರುವುದು ಖಚಿತವಾಗಿದೆ. ನಾವು ಯಾವುದೇ ಭಾಗಕ್ಕೆ ಹೋದರು ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಿದ್ದೇವೆ, ಹಿಂದೆ ಸಿದ್ದರಾಮಯ್ಯ ಕಾರಿಗೆ ಕಾಗೆ ಬಡಿತು, ಬಜರಂಗದಳ ನಿಷೇಧ ಮಾಡುತ್ತೇನೆ ಅಂದ ಕೂಡಲೇ ಈಗ ಡಿಕೆಶಿ ಹೆಲಿಕ್ಯಾಪ್ಟರ್​ಗೆ ಹದ್ದು ಬಂದು ಬಡಿತು, ಕಾಂಗ್ರೆಸ್ ಅಂದ್ರೆ ಪ್ರಾಣಿ ಪಕ್ಷಿಗಳಿಗೂ ಇಷ್ಟವಿಲ್ಲ. ಪ್ರಜ್ಞಾವಂತ ಮತದಾರರೇ ನಿಮ್ಮ ಮನಸ್ಸಿನಲ್ಲೂ ಕಾಂಗ್ರೆಸ್ ಇರುವುದಿಲ್ಲ, ಮತ್ತೆ ಕಾಂಗ್ರೆಸ್ ಅವರನ್ನ ಅಧಿಕಾರಕ್ಕೆ ತಂದರೆ ಕೋಟಿ ಕೋಟಿ ಲೂಟಿ ಮಾಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿ ಕೊಡ್ತಿವಿ ಎಂದು ಹೇಳುತ್ತಿದ್ದಾರೆ, ಆದರೆ, ಸಿದ್ದರಾಮಯ್ಯರನ್ನ ಮೈಸೂರು ಜನರೆ ನಂಬಲ್ಲ, ಚಾಮುಂಡೇಶ್ವರಿ ಜನ ಸೋಲಿಸಿದ್ದರು, ಮೈಸೂರು ದಸರಾಗೆ ಫೇಮಸ್ಸು ಆದ್ರೆ ಸಿದ್ದರಾಮಯ್ಯ, ಮಹಿಷಾ ದಸರಾ ಅಂತ ನಾನ್ಸೆನ್ಸ್ ಶುರು ಮಾಡಿದಕ್ಕೆ ಚಾಮುಂಡೇಶ್ವರಿನೆ 35 ಸಾವಿರ ವೋಟುಗಳಿಂದ ಸೋಲಿಸಿದ್ದಳು. ಬಿಜೆಪಿ ಬಂದ್ರೆ ಮಳೆ ಬರುತ್ತೆ, ಭೂಮಿ ಹಸನಾಗುತ್ತೆ, ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಬರಗಾಲ ಹೋಗಿ ಮಳೆ ಬಂತು, ಕಾಂಗ್ರೆಸ್​ನವರು ಅಕ್ಕಿಯನ್ನೂ ಕೊಡಲ್ಲ, 2 ಸಾವಿರವನ್ನೂ ಕೊಡಲ್ಲ, ಆಮ್ ಆದ್ಮಿ ದೆಹಲಿಯಲ್ಲಿ ಹೀಗೆ ಹೇಳಿತ್ತು, ಈಗ ಏನೂ ಕೊಡ್ತಿಲ್ಲ ಬರಿ ಸುಳ್ಳು ಅಶ್ವಾಸನೆ ನೀಡುತ್ತಾರೆ ಎಂದು ಹೇಳಿದರು.

ಸಂತೋಷ ಜೀ ಬಗ್ಗೆ ಸುಳ್ಳು ಸುದ್ದಿ ಮಾಡಿ ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದ್ದಾರೆ, ವೀರಶೈವರ ಬಗ್ಗೆ ಹಗರವಾಗಿ ಮಾತನಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್​ನವರು ಈ ಬಗ್ಗೆ ವಾಟ್ಸಾಪ್ ನಲ್ಲಿ ಹರಿಬಿಡುತ್ತಿದ್ದಾರೆ. ಸಂತೋಷ ಅವರ ಬಗ್ಗೆ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ, ವೀರಶೈವ ಸೇರಿ ಎಲ್ಲಾ ಸಮುದಾಯ ಉಳಿಯಲು ಬಿಜೆಪಿ ಸರ್ಕಾರ ಬರಬೇಕು ಎಂದರು. ಈ ವೇಳೆ ಕೇಂದ್ರ ಸಚಿವ ಮನ್ಸುಖ್​ ಮಾಂಡವಿಯಾ ಸೇರಿದಂತೆ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:’ದಿ ಕೇರಳ ಸ್ಟೋರಿ‘ ಭಯೋತ್ಪಾದನೆಯ ಪಿತೂರಿ ಆಧರಿಸಿದ ಚಿತ್ರ: ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.