ರಾಯಚೂರು: ಮಟಮಾರಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ವೇಳೆ ಜನಜಂಗುಳಿ ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.
ಮಟಮಾರಿ ಗ್ರಾಮದಲ್ಲಿ ಗುರುವಾರ ಸಂಜೆ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆ, ರಥೋತ್ಸವ ನಡೆಯುತ್ತಿತ್ತು. ಕೊರೊನಾ ಕಾರಣದಿಂದಾಗಿ ಸರಳವಾಗಿ ರಥೋತ್ಸವ ನಡೆಸಲು ದೇವಾಲಯದ ಕಮಿಟಿ ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆ, ಸೀಮಿತ ಜಾಗದವರೆಗೆ ರಥ ಎಳೆಯಲು ಅಷ್ಟೇ ಪ್ರಮಾಣದ ಹಗ್ಗ ಹಾಕಲಾಗಿತ್ತು. ಆದರೆ, ರಥೋತ್ಸವಕ್ಕೆ ಬಂದ ಭಕ್ತರು ಪ್ರತಿವರ್ಷದಂತೆ ಹಗ್ಗವನ್ನು ಎಳೆದಾಡತೊಡಗಿದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಇನ್ನು, ರಥ ಎಳೆಯುವಾಗ ಹಗ್ಗ ತುಂಡಾಗಿದೆ ಎನ್ನಲಾಗುತ್ತಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.