ETV Bharat / state

ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶ: ರಾಯಚೂರು ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಜನರ ಮುತ್ತಿಗೆ - ರಾಯಚೂರು

ಸರಿಯಾಗಿ ನೀರು ಸರಬರಾಜು ಮಾಡದ ರಾಯಚೂರು ನಗರಸಭೆಯ ವಿರುದ್ಧ ಜನ ಪ್ರತಿಭಟನೆ ನಡೆಸಿದರು.

People Siege of municipal pump house
ನೀರಿಗಾಗಿ ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಮುತ್ತಿಗೆ
author img

By

Published : Jul 11, 2023, 12:58 PM IST

ನೀರಿಗಾಗಿ ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಜನರಿಂದ ಮುತ್ತಿಗೆ

ರಾಯಚೂರು: ಕಳೆದ ಒಂದು ವಾರದಿಂದ ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶಗೊಂಡ ಬಡಾವಣೆ ನಿವಾಸಿಗಳು ಏಕಾಏಕಿ‌ ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ನಗರದ ಹೈದರಾಬಾದ್ ರಸ್ತೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೀರು ಸರಬರಾಜು ಘಟಕದಲ್ಲಿನ ಐಪಿ ಪಂಪ್ ಸೆಟ್​​ಗಳು ಹಾಳಾಗಿವೆ ಎಂದು ನೆಪವೊಡ್ಡಿ ವಾರದಿಂದ ಕುಡಿಯುವ ನೀರು ಬಿಡದೆ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ತನ ತೋರಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ಉಪವಾಸ ಕುಳಿತ ರೈತರು: ಸಚಿವರ ಭರವಸೆ ಮೇರೆಗೆ ಉಪವಾಸ ಅಂತ್ಯ

ಎಲ್‌ಬಿಎಸ್ ನಗರ, ಗಂಜ್ ಏರಿಯಾ, ಮಡ್ಡಿಪೇಟ, ಸಿಯಾತಲಾಬ್, ಅಂದ್ರೂನ್ ಕಿಲ್ಲಾ, ಮಕ್ತಲ್‌ಪೇಟೆ, ಬೇಸ್ತ್ರವಾರ ಪೇಟೆ, ಲೋಹರ ವಾಡಿಗಳಲ್ಲಿ ನೀರು ಸರಬರಾಜು ಮಾಡಬೇಕು. ಆದರೆ ನೀರು ಪೂರೈಕೆಯಾಗಿಲ್ಲ. ಪರಿಣಾಮ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಪಿ ಪಂಪ್​ಸೆಟ್ ಕೆಲಸ ಮಾಡುವ ಮೇಸ್ತ್ರಿ ಹುಸೇನಪ್ಪ ಮೋಟಾರುಗಳನ್ನು ಬಂದ್ ಮಾಡಿ ನೀರು ಬರದಂತೆ ಮಾಡುತ್ತಿದ್ದಾರೆ ಎಂದು ದೂರಿ ಎರಡ್ಮೂರು ಗಂಟೆಗಳ ಕಾಲ ಜನ ಘಟಕದ ಮುಂಭಾಗ ಧರಣಿ ನಡೆಸಿದರು.

ಈ ವೇಳೆ ನಗರ ಸಭೆಯ ಕಿರಿಯ ಅಭಿಯಂತರ ನವೀನ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಬಳಿಕ ಮೋಟಾರುಗಳಿಗೆ ಕೇಬಲ್​ಗಳನ್ನು ಆಳವಡಿಸಿ, ಜನರಿಗೆ ನೀರು ಸರಬರಾಜು ಮಾಡುವಂತೆ ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ಆದರೆ ನಿರಂತರವಾಗಿ ಮೋಟಾರ್​ ರನ್ನಿಂಗ್ ಮಾಡಿರುವುದರಿಂದ ಓವರ್​ಲೋಡ್ ಆಗಿ ಅಡಚಣೆ ಉಂಟಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: Water problem : ಬೆಳಗಾವಿಯಲ್ಲಿ ನೀರಿಗಾಗಿ‌ ಹಾಹಾಕಾರ: ಟ್ಯಾಂಕರ್ ಮೊರೆ ಹೋದ ಕುಂದಾನಗರಿಯ ಜನ..!

ಇವರ ಮಾತಿಗೆ ಒಪ್ಪದ ಪ್ರತಿಭಟನಾನಿರತ ಜನರು ನಗರಸಭೆ ಎಇಇ ಶರಣಪ್ಪ ಅವರಿಗೆ ಈ ವಿಷಯದ ಬಗ್ಗೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಆದರೆ ಅವರು ನನ್ನ‌ ಕೈಯಲ್ಲಿ ಏನು ಇಲ್ಲ. ನಾನು ಏನು ಮಾಡಲು ಆಗುವುದಿಲ್ಲ ಎಂದು ನಿರ್ಲಕ್ಷ್ಯದಿಂದ ಉತ್ತರ‌ ನೀಡಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಲ ಕಾಲಕ್ಕೆ ಸರಿಯಾಗಿ ನೀರು ಸರಬರಾಜು ಮಾಡಬೇಕಾದ ನಗರಸಭೆ ಸಂಪರ್ಕ ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ನೀರು ಒದಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕುಡಿಯುವ ನೀರಿಗಾಗಿ 17 ವರ್ಷ ಪಾದರಕ್ಷೆ ಧರಿಸದೇ ಹೋರಾಟ: ಚಪ್ಪಲಿ ತೊಡಿಸಿದ ಶಾಸಕ, ಸನ್ಮಾನಿಸಿದ ಸಿಎಂ

ಪೂರೈಕೆಯಾಗದ ನೀರು.. ಸ್ಥಳೀಯರಿಂದ ಪ್ರತಿಭಟನೆ: ನೀರಿನ ಸಮಸ್ಯೆಯಿಂದ ಬೇಸತ್ತ ಗದಗ ಜಿಲ್ಲೆಯ ನೇಕಾರ ಕಾಲೋನಿ ನಿವಾಸಿಗಳು ಇತ್ತೀಚೆಗೆ ನೀರಿಗಾಗಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ್ದರು. ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕೆಲವೆಡೆ ಮಾತ್ರ, ಕುಡಿಯುವ ನೀರಿಗೆ ಜಗಳ - ಹೊಡೆದಾಟಗಳು ನಡೆದಿವೆ. ನಲ್ಲಿ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ನಾವೆಲ್ಲ ಕೂಲಿ ಕೆಲಸ ಮಾಡಿ ಜೀವನ ನಡೆಸುವವರು, ನಮ್ಮ ಸಮಸ್ಯೆಗೆ ನಗರಸಭೆ ಯಾವ ಸದಸ್ಯರು ಅಧಿಕಾರಿಗಳು ಸ್ಪಂದಿಸಿಲ್ಲ. ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ವಾರ್ಡಿನ ಜನರು ಆಗ್ರಹಿಸಿದ್ದರು.

ಇದನ್ನೂ ಓದಿ: ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯ ಹಲವೆಡೆ ಪೂರೈಕೆಯಾಗದ ನೀರು: ಸ್ಥಳೀಯರಿಂದ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.