ರಾಯಚೂರು: ಆಸ್ಪತ್ರೆ ಬಾಗಿಲಿಗೆ ಬಂದವರು ವ್ಯಾಕ್ಸಿನ್ಗಾಗಿ ಪರದಾಟ ನಡೆಸಿದ್ದಾರೆ.
ನಗರದಲ್ಲಿನ ನಿವಾಸಿಗಳು ಜಹೀಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದರೆ, ಆಸ್ಪತ್ರೆಯ ಬಾಗಿಲು ತೆರೆದಿರಲಿಲ್ಲ. ಅಲ್ಲದೇ ಆರೋಗ್ಯ ಕೇಂದ್ರದ ಮುಂದೆ ಕೊವ್ಯಾಕ್ಸಿನ್ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಬೋರ್ಡ್ ಹಾಕಿದ್ರು. ಹಾಗಾಗಿ ಆಸ್ಪತ್ರೆ ಎದುರು ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಲ ಹೊತ್ತು ಜನರು ಕ್ಯೂ ನಿಂತಿದ್ದರು.
ಬಳಿಕ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಜನಕ್ಕೆ ಮಾತ್ರ ಅವಕಾಶ ನೀಡಿರುವುದರಿಂದ ತಾವು ವ್ಯಾಕ್ಸಿನ್ ಪಡೆಯುವುದಾಗಿ ಆಸ್ಪತ್ರೆ ಮುಂದೆಯೇ ಜನರು ವಾಗ್ವಾದಕ್ಕೆ ಇಳಿದರು.
ಇದನ್ನೂ ಓದಿ: ಕೋವಿಡ್ ನಿಧಿಗೆ ಅಪೆಕ್ಸ್ ಬ್ಯಾಂಕ್‌ನಿಂದ 5 ಕೋಟಿ ರೂ. ದೇಣಿಗೆ