ರಾಯಚೂರು : ನಗರದಲ್ಲಿ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಆರೋಪ ಕೇಳಿ ಬಂದಿದೆ. ಕಲುಷಿತ ನೀರಿನಿಂದ ವಾಂತಿ, ಭೇದಿಯಾಗುತ್ತಿದೆ. ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಲುಷಿತ ನೀರು ಕುಡಿದ ಹಿನ್ನೆಲೆ ಮೂವರಲ್ಲಿ ಮೂತ್ರಪಿಂಡದ ಸಮಸ್ಯೆ ಕಂಡು ಬಂದಿದೆಯಂತೆ.
ಒಬ್ಬರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಬಿಪಿ ಮೆಂಟೈನ್ ಆಗ್ತಿದ್ದರೂ ಕಿಡ್ನಿಗೆ ತೊಂದರೆ ಆಗುತ್ತಿದೆ. 60 ಜನರ ಪೈಕಿ 23 ಮಕ್ಕಳು ಅಡ್ಮಿಟ್ ಆಗಿದ್ದಾರೆ. ಈ ಬಗ್ಗೆ ಮಾನಿಟರ್ ಮಾಡಲಾಗ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಗರದಲ್ಲಿ ಸರಬರಾಜು ಆಗುವ ನೀರು ಸೇವನೆಯಿಂದ ನಿರ್ಜಲೀಕರಣ ಪ್ರಕರಣ ಹೆಚ್ಚಾಗಿ ಕಂಡು ಬಂದಿದೆ. ಘಟನೆಯಿಂದ ನಗರದ ಜನರಲ್ಲಿ ಆತಂಕ ಎದುರಾಗಿದೆ.
ನಗರಕ್ಕೆ ಪೂರೈಸಲು ಶುದ್ಧೀಕರಣ ಘಟಕಗಳನ್ನ ಸ್ಥಾಪಿಸಲಾಗಿದೆ. ಆದರೆ, ಅವುಗಳು ನಾಮಕಾವಸ್ತೆಗೆ ಸೀಮಿತವಾಗಿವೆ. ನಗರಸಭೆಯಿಂದ ಪೂರೈಕೆ ಮಾಡುವ ನೀರನ್ನು ಜನರಿಗೆ ತೊಂದರೆಯಾಗದಂತೆ, ಕಲುಷಿತಗೊಳ್ಳದಂತೆ ನಿಗಾವಹಿಸಿ ನೀರು ಪೂರೈಕೆ ಮಾಡಬೇಕಾದ ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಕಲುಷಿತ ನೀರು ಸೇವನೆಯಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಿ ಇಂದಿರಾನಗರದ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ. ಘಟನೆಯಿಂದ ನಗರದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಿಸಿದ ಘಟನೆಗೆ ಕಾರಣವಾದ ಅಧಿಕಾರಗಳ ಮೇಲೆ ಕ್ರಮಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳುಹಿಸಿದಂತೆ ಎಚ್ಚರಿಕೆ ವಹಿಸಿ ನಗರಸಭೆ ಹಾಗೂ ಜಿಲ್ಲಾಡಳಿತ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
ಓದಿ: ಖಾತೆ ಮಾಡಿಕೊಡಲು ವಿಳಂಬ ಆರೋಪ : ಅಧಿಕಾರಿಗೆ ಚಾಕು ತೋರಿಸಿ ಗಲಾಟೆ ಮಾಡಿದ ವ್ಯಕ್ತಿ