ETV Bharat / state

ರಾಯಚೂರು ನ್ಯಾಯಾಲಯದ ಆವರಣದಿಂದಲೇ ಕೊಲೆ ಆರೋಪಿಗಳು ಪರಾರಿ!

ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಿಂದ ಕೊಲೆ ಪ್ರಕರಣವೊಂದರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

murder accused escaped from raichur court premises
ನ್ಯಾಯಾಲಯದ ಆವರಣದಿಂದಲೇ ಕೊಲೆ ಆರೋಪಿಗಳು ಪರಾರಿ
author img

By

Published : Apr 21, 2022, 5:12 PM IST

ರಾಯಚೂರು: ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದೊಯ್ಯುವ ವೇಳೆ ಮೂವರು ಆರೋಪಿಗಳು ಎಸ್ಕೇಪ್ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ನ್ಯಾಯಾಲಯದಿಂದ ಮಹಾರಾಷ್ಟ್ರ ಮೂಲದ ಆರೋಪಿ1- ಹಶ್ಯಾ ಅಲಿಯಾಸ್ ರಮೇಶ ಸಿಂಧೆ ಬೂದನಾಳ, ಎ2-ಇಶ್ರಾಮ ಅಲಿಯಾಸ್ ರಾಜೇಶ ಖನ್ನಾ ಹಾಗೂ ಎ4- ಪಲ್ಲು ಗೋವಿಂದ ಅರ್ಜುನ್ ಬೋಸ್ಲೆ ಎಂಬ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಮಾನವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇವರ ಪೈಕಿ ಓರ್ವ ಆರೋಪಿ ಮೃತಪಟ್ಟಿದ್ದರೆ, ಉಳಿದ ಆರು ಆರೋಪಿಗಳಲ್ಲೊರ್ವ ಪತ್ತೆಯಾಗಿಲ್ಲ. ಇನ್ನುಳಿದ ಐವರಲ್ಲಿ ಮೂವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಕಲಬುರಗಿ: ಸಿಎಂ ವಾಹನಕ್ಕೆ ಕಾಂಗ್ರೆಸ್​ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ವಿಚಾರಣೆಗೆ ಮುಂದಿನ ದಿನಾಂಕ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಮರಳಿ ಕರೆದುಕೊಂಡು ಹೋಗುವ ವೇಳೆ ಮೂತ್ರ ವಿರ್ಸಜನೆ ಮಾಡುವುದಾಗಿ ಹೇಳಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಶೋಧ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.