ETV Bharat / state

ಟ್ರ್ಯಾಕ್ಟರ್​ಗೆ ಸಿಲುಕಿ ತಾಯಿ-ಮಗು ಸಾವು: ರಾಯಚೂರಿನಲ್ಲಿ ದುರಂತ - Mother-child death news

ರಾಯಚೂರಿನ ಜಿನ್ನಿಂಗ್ ಫ್ಯಾಕ್ಟರಿ ಬಳಿ ಟ್ರ್ಯಾಕ್ಟರ್​ಗೆ ಸಿಲುಕಿ ತಾಯಿ-ಮಗು ಇಬ್ಬರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

accident
accident
author img

By

Published : Nov 4, 2021, 12:43 PM IST

ರಾಯಚೂರು: ಟ್ರ್ಯಾಕ್ಟರ್ ಹರಿದು ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಜಿನ್ನಿಂಗ್ ಫ್ಯಾಕ್ಟರಿ ಬಳಿ ಇಂದು ನಡೆದಿದೆ.

ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ವೈಶಾಲಿ (26), ಸಮರ್ಥ(3) ಮೃತ ತಾಯಿ-ಮಗು. ಜಿನ್ನಿಂಗ್ ಫ್ಯಾಕ್ಟರಿ ಬಳಿ ಹತ್ತಿ ತುಂಬಿಕೊಂಡಿದ್ದ ಟ್ರ್ಯಾಕ್ಟರ್ ರಿವರ್ಸ್​ ತೆಗೆದುಕೊಳ್ಳುತ್ತಿತ್ತು. ಈ ವೇಳೆ ಮಗು ಟ್ರ್ಯಾಕ್ಟರ್ ಒಳಗಡೆ ಸಿಲುಕುತ್ತದೆ ಎಂದು ತಾಯಿ ಸಮರ್ಥನನ್ನು ಕರೆದುಕೊಳ್ಳಲು ಹೋಗುವಷ್ಟರಲ್ಲಿ ಮಗು-ತಾಯಿ ಇಬ್ಬರೂ ಟ್ರ್ಯಾಕ್ಟರ್​ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಘಟನಾ ಸ್ಥಳಕ್ಕೆ ಸಂಚಾರಿ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರ್ ಚಾಲಕ ಮಂಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.