ರಾಯಚೂರು: ಮಂತ್ರಾಲಯ ಮಠದ ಹೆಸರಿನಲ್ಲಿ ಹಣ ವಂಚನೆ ಮಾಡುತ್ತಿರುವ ಪ್ರಕರಣ ಕೇಳಿ ಬಂದಿದೆ. ಶ್ರೀಮಠದಲ್ಲಿ 25 ರೂಪಾಯಿಗೆ ಸಿಗುವ ಪರಿಮಳ ಪ್ರಸಾದವನ್ನು 400 ರೂ.ಗೆ ಮಾರಾಟ ಮಾಡಲಾಗಿದೆ. ನಕಲಿ ವೆಬ್‌ಸೈಟ್ ಮಾಡಿ ಮಾರಾಟ ಮಾಡಿರುವ ಪ್ರಕರಣ ಗಮನಕ್ಕೆ ಬಂದಿದೆ. ಈ ಕುರಿತು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಠದ ಮ್ಯಾನೇಜರ್ ಎಸ್.ಕೆ. ಶ್ರೀನಿವಾಸ್ ರಾವ್ ಹೇಳಿದ್ದಾರೆ.
ಮಂತ್ರಾಲಯ ಮಠದ ಅರ್ಚಕರ ಹೆಸರಿನಲ್ಲಿಯೂ ಹಣ ವಸೂಲಿ ಮಾಡಲಾಗಿದೆ. ಮಂತ್ರಾಲಯ ಬ್ಯಾಂಕ್ನಲ್ಲಿ ಖಾತೆ ತೆಗೆದು ಹಣ ವಸೂಲಿ ಮಾಡಿದ್ದಾರೆ. ಮಾತೃಭೂಮಿ ಹಿಂದೂ ಸ್ಪಂದನೆ ಹೆಸರಿನಲ್ಲಿ ಕೃತ್ಯ ಎಸಗಲಾಗಿದೆ. ಮಂತ್ರಾಲಯ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿಯೂ ಹಣ ವಸೂಲಿ ಮಾಡಲಾಗಿದ್ದು, ಈ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿದೆ ಎಂದು ಹೇಳಿದರು.
ಭಕ್ತರು ದೇಣಿಗೆ ನೀಡಬೇಕಾದರೆ ಮಠದ ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ನೀಡಬೇಕು. ಅಕ್ರಮದ ಬಗ್ಗೆ ಮಾಹಿತಿ ಇದ್ರೆ ತಕ್ಷಣವೇ ಶ್ರೀಮಠಕ್ಕೆ ತಿಳಿಸಬೇಕು ಹಾಗೂ ಎಲ್ಲಾ ಭಕ್ತರು ಎಚ್ಚರದಿಂದ ಇರಬೇಕೆಂದು ಎಸ್.ಕೆ. ಶ್ರೀನಿವಾಸ್ ರಾವ್ ತಿಳಿಸಿದರು.
ಇದನ್ನೂ ಓದಿ: ಯಕ್ಷ ನೃತ್ಯದ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ಶಿರಸಿಯ ಬಾಲಕಿ