ETV Bharat / state

ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್​ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’ - Raichuru latest news

ಸಿ.ಪಿ.ಯೋಗೇಶ್ವರ ಭ್ರಷ್ಟಾಚಾರ ಹೊತ್ತು ಮಲಗಿದ್ದಾನೆ. ಭ್ರಷ್ಟನನ್ನ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಕುಟುಂಬ ರಾಜಕಾರಣಕ್ಕೆ ಬಿಎಸ್​ವೈ ಬಲಿಯಾಗಿದ್ದಾರೆ. ನಾಲಿಗೆ ಇರುವ ನಾಯಕರಾಗಿದ್ದ ಬಿಎಸ್‌ವೈ ನಾಲಿಗೆ ಇಲ್ಲದ ನಾಯಕರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್​ ಸಿಎಂ ಬಿಎಸ್​ವೈ ವಿರುದ್ಧ ಗುಡುಗಿದ್ದಾರೆ.

raichur
ಹೆಚ್​. ವಿಶ್ವನಾಥ್​
author img

By

Published : Jan 14, 2021, 11:03 AM IST

Updated : Jan 14, 2021, 11:27 AM IST

ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬ ದಲ್ಲಾಳಿ, ಭ್ರಷ್ಟಾಚಾರಿಯನ್ನ ಸಚಿವರಾನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್​​​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಈ ಸಮಯದಲ್ಲಿ ಹಲವು ಒತ್ತಾಯಗಳು ಬರುವುದು ಸಹಜ. ಆದ್ರೆ ಭ್ರಷ್ಟರನ್ನ ಸಚಿವರನ್ನಾಗಿ ಮಾಡುವ ಒತ್ತಾಯ ಸಾಮಾನ್ಯವಾಗಿ ಉದ್ಭವಿಸುವುದಿಲ್ಲ. ಭ್ರಷ್ಟನನ್ನ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಸಿ.ಪಿ.ಯೋಗೇಶ್ವರ ಭ್ರಷ್ಟಾಚಾರವನ್ನ ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾಸಿಟಿಗೆ ನೂರಾರು ಕೋಟಿ ಹಣವನ್ನ ಕೊಳ್ಳೆ ಹೊಡೆದಿದ್ದಾ‌ನೆ. ಭ್ರಷ್ಟನ ವಿರುದ್ದ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್​ಗೆ ರೆಫರ್ ಮಾಡಿದೆ. ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಸಚಿವ ಸ್ಥಾನದ ಪಟ್ಟ ನೀಡಿದ್ದಾರೆ. ಯಡಿಯೂರಪ್ಪ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. 17 ಜನ ಕ್ಷಿಪ್ರ ಕ್ರಾಂತಿ ಮಾಡಿ ಹೊರ ಬಂದಿದ್ದೆವು. ಒಳ್ಳೆಯದಾಗುತ್ತೆ ಅನ್ನುಕೊಂಡಿದ್ದೇವೆ. ಆದ್ರೆ ಈ ಬೆಳವಣಿಗೆ ಕಂಡು ಬೇಜಾರಾಗಿದೆ. ದಲಿತ ನಾಗೇಶ್​ರನ್ನ ಕಿತ್ತು ಹಾಕಿದ್ದಾರೆ. ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶವಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್​ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’

ಸಿಡಿ ಬಿಡುಗಡೆ ಆಗುತ್ತದೆ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆಗಲೇ ಎಲ್ಲಾ ಗೊತ್ತಾಗುತ್ತದೆ. ಯತ್ನಾಳ್​ ಅಥವಾ ಬೇರೆ ಯಾರೋ ಬಿಡುಗಡೆ ಮಾಡ್ತಾರೆ, . ಬಿ.ಎಸ್.ಯಡಿಯೂರಪ್ಪ ಬಗ್ಗೆ ಈಗಲೂ ಅಭಿಮಾನವಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಈಗ ನಡೆಯುತ್ತಿರುವುದು ಸನ್ ಸ್ಟ್ರೋಕ್. ಈ ಹಿಂದೆ ಜನತಾ ಪರಿವಾರ ಸನ್ ಸ್ಟ್ರೋಕ್‌ಗೆ ಒಳಗಾಗಿತ್ತು. ಇದೀಗ ಸನ್ ಸ್ಟ್ರೋಕ್ ,ಫ್ಯಾಮಿಲಿ ಸ್ಟ್ರೋಕ್​ನಲ್ಲಿ ಬಿಜೆಪಿ ಹಾಳಾಗುತ್ತಿದೆ. ಕಾಂಗ್ರೆಸ್ ಸಹ ಸನ್ ಸ್ಟ್ರೋಕ್​ನಲ್ಲಿ ಹಾಳಾಗಿ ಹೋಗಿದೆ. ವಿಜಯೆಂದ್ರನಿಂದ ಈಗ ಬಿಜೆಪಿ ಸನ್ ಸ್ಟ್ರೋಕ್​ಗೆ ಒಳಗಾಗಿದೆ ಎಂದರು.

ಕುಟುಂಬ ರಾಜಕಾರಣಕ್ಕೆ ಬಿಎಸ್​ವೈ ಬಲಿಯಾಗಿದ್ದಾರೆ ಎಂದು ಬೇಜಾರಾಗಿದೆ. ನಾಲಿಗೆ ಇರುವ ನಾಯಕರಾಗಿದ್ದ ಬಿಎಸ್‌ವೈ ನಾಲಿಗೆ ಇಲ್ಲದ ನಾಯಕರಾಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ. ನಾವು ಪರಿಸ್ಥಿತಿಯ ಶಿಶುಗಳಾಗಿದ್ದೇವೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ನಾನೇನಾದರೂ ಅಸಂಬದ್ದವಾಗಿ ಮಾತನಾಡಿದರೆ ನನ್ನ ವಿರುದ್ದ ಕ್ರಮ ತೆಗೆದುಕೊಳ್ಳಲಿ. ಯಾರ ಮುಲಾಜು, ಯಾರ ಭಿಕ್ಷೆಯಿಂದ ಸಿಎಂ ಸ್ಥಾನದಲ್ಲಿ ಕುಳಿತಿದ್ದೀರಾ ಎನ್ನುವುದನ್ನ ಯೋಚಿಸಿಕೊಳ್ಳಲಿ ಎಂದು ಬಿಎಸ್​ವೈ ವಿರುದ್ಧ ಗುಡುಗಿದರು.

ಇನ್ನೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಕೃತಜ್ಞತೆಯಿಲ್ಲದ, ಭಾವವಿಲ್ಲದ ನಾಯಕನಾಗಿದ್ದಾ‌ನೆ. ಸಿದ್ದರಾಮಯ್ಯನನ್ನ ನಾವು ತಲೆ ಮೇಲೆ ಹೊತ್ತು ತಿರುಗಾಡಿದೆವು. ಈಗ ಅದರ ಕೊರತೆ ಎದುರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Last Updated : Jan 14, 2021, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.