ETV Bharat / state

ರೈತರಿಗೆ ಅನ್ಯಾಯ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ: ಸಚಿವ ಮುನೇನಕೊಪ್ಪ - ಈಟಿವಿ ಭಾರತ ಕನ್ನಡ

ನಮ್ಮ ಬಿಜೆಪಿ ಸರ್ಕಾರ ರೈತರ ಪರವಾಗಿದೆ. ಕಬ್ಬು ಬೆಳೆಗಾರರ ಪರವಾಗಿದೆ ಎಂದು ಸಚಿವರು ಹೇಳಿದರು.

minister-shankar-patil-munenakoppa-talks-in-raichur
ರೈತರಿಗೆ ಅನ್ಯಾಯ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ:ಸಚಿವ ಮುನೇನಕೊಪ್ಪ
author img

By

Published : Dec 15, 2022, 7:20 PM IST

ರಾಯಚೂರು: ರೈತರಿಗೆ ಅನ್ಯಾಯ ಮಾಡುವ ಯಾವುದೇ ಸಕ್ಕರೆ ಕಾರ್ಖಾನೆಗಳಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ಮೇಲೆ ನಡೆದಿರುವ ದಾಳಿಯ ಕುರಿತಾಗಿ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ರೈತರಿಗೆ ಅನ್ಯಾಯ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ:ಸಚಿವ ಮುನೇನಕೊಪ್ಪ

ಸರ್ಕಾರ ಕಾರ್ಖಾನೆ ಮಾಲೀಕರ ಪರವಾಗಿದೆ. ತೂಕದ ಜೊತೆಗೆ ಇಳುವರಿಯಲ್ಲೂ ನಮಗೆ ಮೋಸವಾಗುತ್ತಿದೆ ಎಂದು ರೈತರು ದೂರು ನೀಡಿದ್ದರು. ಆದರೆ ನಮ್ಮ ಸರ್ಕಾರ ರೈತರ ಜೊತೆಗೆಯೇ ಇದೆ. ಕಬ್ಬು ಬೆಳೆಗಾರರ ಪರವಾಗಿದೆ ಎಂದರು.

ರಾಜ್ಯದಲ್ಲಿ ಏಕಕಾಲಕ್ಕೆ 20 ಕಡೆ ಮೊದಲನೇ ಹಂತದ ದಾಳಿ ನಡೆದಿದೆ. ಇದನ್ನು ಮುಂದುವರೆಸಿ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಆತ ಯಾವುದೇ ಪಕ್ಷವಾಗಲಿ ರೈತರಿಗೆ ಅನ್ಯಾಯ ಮಾಡುವ ಯಾವುದೇ ಸಕ್ಕರೆ ಕಾರ್ಖಾನೆ ಇದ್ದರು ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.

ಬಿಜೆಪಿ ಪಕ್ಷದಲ್ಲಿ ಬಿಎಸ್​ವೈ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಸ್​ವೈ ಅವರನ್ನು ಹಿಂದೆ ತಳ್ಳುವಂತಹ ಕಾರ್ಯ ನಡೆದಿಲ್ಲ. ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಮಹಾನ್ ನಾಯಕ ಅವರು. ರಾಷ್ಟ್ರದಲ್ಲಿ ಅವರಿಗೆ ದೊಡ್ಡ ಸ್ಥಾನವಿದೆ. ಅದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಬಿಎಸ್​ವೈ ನಮ್ಮ ವರಿಷ್ಠ ನಾಯಕರು ಎಂಬುದು ರಾಜ್ಯದ ಜನತೆ ಗೊತ್ತಿದೆ ಎಂದು ಹೇಳಿದರು.

ಕಚೇರಿ ಕಾರ್ಯಕ್ರಮಕ್ಕೆ ತಡವಾಗಿ ಆಹ್ವಾನಿಸಿದ ವಿಚಾರದ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ನಮ್ಮಲ್ಲೊಂದು ಸಿದ್ಧಾಂತವಿದೆ. ಹಾಗಾಗಿ ನಮಗೆ ಸೀಮಿತವಾದ ವಿಚಾರ ಮಾತ್ರ ಮಾತನಾಡಬೇಕು ಎಂದರು.

ಜನಾರ್ದನ್ ರೆಡ್ಡಿ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷ ಸೂಕ್ತವಾದ ತೀರ್ಮಾನ ಕೈಗೊಳ್ಳುತ್ತೆ. ಬಿಜೆಪಿ ಅಧಿಕಾರಕ್ಕೆ ಬರಲು ಅವರದು ಶ್ರಮವಿದೆ. ಪಕ್ಷದಲ್ಲಿ ಅವರಿದ್ದಾರೋ ಇಲ್ಲವೋ..? ಈ ಮಾತನ್ನು ಅವರಲ್ಲಿಯೇ ಕೇಳಬೇಕು ಎಂದರು.

ಇದನ್ನೂ ಓದಿ:ಶಾಸಕ ರಾಜೇಗೌಡರ ಆದಾಯದ ಮೂಲ ಪ್ರಶ್ನಿಸಿದ ಮಾಜಿ ಶಾಸಕ ಜೀವರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.