ರಾಯಚೂರು: ಕಾಂಗ್ರೆಸ್ನವರು ಪ್ರತಿಭಟನೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಕೆಎಸ್ಆರ್ಟಿಸಿ ನೌಕರರನ್ನು ಕರೆದು ತಂದು ಪ್ರತಿಭಟನೆ ಮಾಡಲು ಅವರೇ ಬೆಂಬಲ ನೀಡಿದ್ದಾರೆ ಎಂದು ಸಚಿವ ನಾರಾಯಣಗೌಡ ಆರೋಪಿಸಿದರು.
ಅವರೆಲ್ಲ ಬಡಪಾಯಿಗಳು. ಕೆಲಸ ಮಾಡಿ ಮನೆ ನಿರ್ವಹಿಸುವುದು ಬಿಟ್ಟು, ಲಕ್ಷಾಂತರ ರೂಪಾಯಿ ಹಣ ಅವರೆಲ್ಲಿಂದ ತರುತ್ತಾರೆ. ಅವರ ಬಳಿ ಮುಷ್ಕರ ಮಾಡಲು ಹಣ ಎಲ್ಲಿಂದ ಬಂತು? ಸ್ಟ್ರೈಕ್ ಪುಗಸಟ್ಟೆ ಮಾಡಲು ಸಾಧ್ಯಾನಾ? ಅವರಿಗೆಲ್ಲ ಊಟ, ವಸತಿ ನೀಡಲು ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಸಾರಿಗೆ ಮುಷ್ಕರಕ್ಕೆ 100 ಪರ್ಸೆಂಟ್ ಹಿಂಬಾಗಿಲಿನಿಂದ ಕಾಂಗ್ರೆಸ್ ಬೆಂಬಲವಿದೆ. ಅವರು ಕೇಳಿದ 10 ಬೇಡಿಕೆಗಳಲ್ಲಿ ಒಂಭತ್ತನ್ನು ಪೂರೈಸಿದ್ದೇವೆ. ಕಾಂಗ್ರೆಸ್ನವರಿಗೆ ಬೇರೆ ಏನು ಕೆಲಸ ಇಲ್ಲ. ಅದಕ್ಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.