ರಾಯಚೂರು : ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದೆ. ಇದೀಗ ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಏ.17ರಂದು ನಡೆದ ಮತದಾನದಲ್ಲಿ ಶೇ.70.48 ಮತದಾನವಾಗಿದೆ. ಹೀಗಾಗಿ, ರಾಜಕೀಯ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಮಸ್ಕಿಯಲ್ಲಿ ಒಟ್ಟು 2,06,429 ಮತದಾರರಿದ್ದಾರೆ. ಇದರಲ್ಲಿ 1,01,340 ಪುರುಷ, 1,05,076 ಮಹಿಳೆಯರು ಹಾಗೂ 13 ಇತರರಿದ್ದಾರೆ. ಇಷ್ಟು ಮತದಾರರ ಪೈಕಿ 73,311 ಪುರುಷ, 72,169 ಮಹಿಳೆಯರು, ಇತರೆ ಇಬ್ಬರು ಸೇರಿ ಒಟ್ಟು 1,45,482 ಮತದಾರರು ವೋಟ್ ಮಾಡಿದ್ದಾರೆ. ಮಹಿಳಾ ಮತದಾರರೇ ಹೆಚ್ಚಿದ್ದರೂ, ಈ ಸಲ ಪುರುಷ ಮತದಾರರು ಹೆಚ್ಚಾಗಿ ಮತದಾನ ಮಾಡಿದ್ದಾರೆ.
ಈ ಮತದಾನದ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು, ಮತದಾನದ ಶೇಕಡಾವಾರು ಲೆಕ್ಕದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಮಾಸ್ಕ್ ಅಭಿಯಾನ : ಮುಖಗವಸು ಹಾಕದ ವ್ಯಾಪಾರಿಗೆ ಎಸ್ಪಿ ಕಪಾಳಮೋಕ್ಷ