ETV Bharat / state

ರಾಯಚೂರಲ್ಲಿ ಬಸ್​ಗಳ​ ಸಂಚಾರ: ಲಾಭವಿಲ್ಲ, ನಷ್ಟವೇ ಹೆಚ್ಚು!

author img

By

Published : May 14, 2020, 10:44 PM IST

ಲಾಕ್​ಡೌನ್​ ಹಿನ್ನೆಲೆ ಎರಡು ತಿಂಗಳಿನಿಂದ ಬಸ್ಸುಗಳು ರಸ್ತೆಗೆ ಇಳಿದಿರಲಿಲ್ಲ. ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.

Lock down relaxation in Raichur
ರಾಯಚೂರಲ್ಲಿ ಲಾಕ್​ಡೌನ್​ ಸಡಿಲಿಕೆ

ರಾಯಚೂರು: ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್ ಸಡಲಿಕೆ ಮಾಡಲಾಗಿದ್ದು, ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಆಯಾ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆ 30 ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಜಿಲ್ಲಾಡಳಿತದ ಅನುಮತಿ ಮೇರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಸ್​ನಲ್ಲಿ ಆಸನದ ವ್ಯವಸ್ಥೆ ಮಾಡಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಈ ಬಸ್‌ಗಳ ಸಂಚಾರಕ್ಕೆ ನಿತ್ಯ 2 ಲಕ್ಷಕ್ಕೂ ಅಧಿಕ ವೆಚ್ಚ ತಗಲುತ್ತಿದ್ದ, ಬಸ್ ಓಡಾಟದ ವೆಚ್ಚ, ಟಿಕೆಟ್ ಸಂಗ್ರಹವಾಗಬೇಕಾಗಿದ್ದ ಹಣವು ಸಂಗ್ರಹವಾಗದೆ ಪ್ರತಿನಿತ್ಯ ಒಂದು ಲಕ್ಷಕ್ಕೂ ಅಧಿಕ ನಷ್ಟವನ್ನು ಸಂಸ್ಥೆ ಅನುಭವಿಸುತ್ತಿದೆ.

ಲಾಕ್‌ಡೌನ್ ಜಾರಿಯಾದ ಬಳಿಕ ಇಲ್ಲಿಯವರೆಗೆ 40 ಕೋಟಿ ರೂಪಾಯಿ ನಷ್ಟ ಅನುಭವಿಸಿರುವ ರಾಯಚೂರು ಎನ್‌ಇಕೆಎಸ್‌ಆರ್‌ಟಿಸಿ ವಿಭಾಗ, ಲಾಕ್‌ಡೌನ್ ಸಡಲಿಕೆ ಬಳಿಕ ಬಸ್ ಓಡಾಟದ ಮೂಲಕ ಮತ್ತೆ ಲಕ್ಷಗಟ್ಟಲೆ ರೂಪಾಯಿಗಳ ನಷ್ಟ ಹೊಂದುತ್ತಿದೆ. ಒಂದು ವೇಳೆ ಪರಿಸ್ಥಿತಿ ‌ಇದೇ ಹಾದಿಯಲ್ಲಿ ಸಾಗಿದರೆ ವಿಭಾಗ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತದೆ ಎಂಬುದು ಅಧಿಕಾರಿಗಳ ಆತಂಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.