ETV Bharat / state

ಕೃಷ್ಣೆಯ ಅಬ್ಬರ: ರಾಯಚೂರು-ಕಲಬುರಗಿ ಸಂಪರ್ಕ ಸೇತುವೆ ಬಂದ್​​

ರಾಯಚೂರಿನ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಬಳಿ ರಾಯಚೂರು-ಕಲಬುರಗಿಗೆ ಸಂರ್ಪಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ಪಕ್ಕದ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು, ಉಕ್ಕಿ ಹರಿಯುತ್ತಿರುವ ನದಿ‌ ನೋಡಲು ಜನರು ಆಗಮಿಸುತ್ತಿದ್ದಾರೆ.

ರಾಯಚೂರು-ಕಲಬುರಗಿ ಸಂಪರ್ಕ ಸೇತುವೆ ಬಂದ್​
author img

By

Published : Aug 4, 2019, 12:44 PM IST

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ರಾಯಚೂರು-ಕಲಬುರಗಿಗೆ ಸಂರ್ಪಕ ಕಲ್ಪಿಸುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಬಳಿ ಇರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ನದಿಯಲ್ಲಿ ನೀರಿನ ಅಬ್ಬರ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನ ನಿಷೇಧಿಸಲಾಗಿತ್ತು. ಆದರೆ ಸೇತುವೆ ಮೇಲೆಯೇ ನೀರು ಹರಿಯುತ್ತಿದ್ದು, ನದಿ ಪಕ್ಕದಲ್ಲಿರುವ ಹೊಲ-ಗದ್ದೆಗಳು ಜಲಾವೃತಗೊಂಡಿವೆ.

ರಾಯಚೂರು-ಕಲಬುರಗಿ ಸಂಪರ್ಕ ಸೇತುವೆ ಬಂದ್​

ಅಲ್ಲದೇ ಸೇತುವೆ ಮೇಲೆ ಜನರು ತೆರಳದಂತೆ ಕ್ರಮ ಕೈಗೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾಡಳಿತದಿಂದಲೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನೊಂದೆಡೆ ಇಷ್ಟು ದಿನಗಳಿಂದ ಬರಿದಾಗಿದ್ದ ನದಿ ಉಕ್ಕಿ ಹರಿಯುತ್ತಿರುವುದನ್ನು‌ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

Intro:ಸ್ಲಗ್: ಹೂವಿನಹೆಡಗಿ ಬ್ರೀಡ್ಜ್‌ಗೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೪-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ನಾರಾಯಣಪುರ ಜಲಾಶಯದಿಂದ ೨.೫೫ ಕ್ಯೂಸೆಕ್ಸ್ ನೀರು ಕೃಷ್ಣ ನದಿಗೆ ಹರಿದು ಬಿಟ್ಟ ಪರಿಣಾಮ ರಾಯಚೂರು-ಕಲಬುರಗಿ ಸಮರ್ಪಕ ಕಲ್ಪಿಸುವ ಸೇತುವೆ ಮೇಲೆ ನೀರು ಬಂದಿವೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಬಳಿ ಬರುವ ಸೇತುವೆ ಮೇಲೆ ನೀರು ಹರಿಯುತ್ತಿದೆ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಹರಿಯುತ್ತಿರುವ ನೀರು ಹಿನ್ನೆಲೆ ಬಾರಿ ವಾಹನಗಳ ಸಂಚಾರವನ್ನ ನಿಷೇಧ ಹೇರಲಾಗಿತ್ತು. ಆದ್ರೆ ಇಂದು ಕೃಷ್ಣ ನದಿಯ ಉಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಹರಿಯುತ್ತಿವೆ ಜತೆಗೆ ನದಿ ಪಕ್ಕದಲ್ಲಿರುವ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಜಲಾವೃತ್ತಗೊಂಡಿವೆ. ಅಲ್ಲದೇ ಸೇತುವೆ ಮೇಲೆ ಜನರನ್ನ ತೆರಳದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ. ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. Conclusion:ಇಷ್ಟು ದಿನಗಳಿಂದ ನೀರಿಲ್ಲದ ಖಾಲಿ ಖಾಲಿಯಾಗಿದ್ದ ನದಿ, ಈಗ ನೀರಿನ ಕಂಗೋಳಿಸುತ್ತಿರುವುದರಿಂದ ಜನರು ಸಹ ನೀರು‌ ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.