ರಾಯಚೂರು: ಮಾನವಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಕರೆ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪುರಸಭೆ ಕಚೇರಿ ಮುಂದೆ ಜನಶಕ್ತಿ ಕೇಂದ್ರ ಸಂಘಟನೆ ಮುಖಂಡರು ಸಗಣಿ ಹಾಗೂ ಚರಂಡಿಯ ನೀರಿನ್ನು ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಮಾನವಿ ಪಟ್ಟಣದಲ್ಲಿನ ಪುರಸಭೆ ಕಾರ್ಯಲಯದ ಮುಂಭಾಗದಲ್ಲಿ ಬಕೆಟ್ನಲ್ಲಿ ಚರಂಡಿ ಹಾಗೂ ಸಗಣಿ ನೀರನ್ನು ಮೈ ಮೇಲೆ ಸುರಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು. ಮಾನವಿ ಪಟ್ಟಣ ಜನತೆಗೆ ಶುದ್ಧ ಕುಡಿಯುವ ನೀರಿನ ಕರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದ್ರೆ ಕಾಮಗಾರಿ ತ್ವರಿಗತಿಯಲ್ಲಿ ಪೂರ್ಣಗೊಳದೆ ವಿಳಂಬವಾಗುತ್ತಿದೆ. ಈ ಕೂಡಲೇ ಕುಡಿಯುವ ನೀರಿನ ಪೂರೈಕ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಇದಕ್ಕೆ ಈ ಪ್ರತಿಭಟನೆ ಮಣಿಯದಿದ್ದರೆ ಹೋರಾಟ ಮತ್ತೊಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ರು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಮೈಮೇಲೆ ಚರಂಡಿ ಹಾಗೂ ಸಗಣಿ ಸುರಿದಕೊಂಡ ಪ್ರತಿಭಟನಾ ನಿರಂತರಿಗೆ ನೀರು ಹಾಕಿದರು. ಬಳಿಕ ಮನವಿ ಪತ್ರ ಸ್ವೀಕರಿಸಿ, ಕಾಮಗಾರಿಯನ್ನ ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.