ETV Bharat / state

ವಿಧಾನಸಭಾ ಉಪ ಚುನಾವಣೆ: ಮಸ್ಕಿ ಕ್ಷೇತ್ರದ ಚಿತ್ರಣ ಹೀಗಿದೆ.. - ಮಸ್ಕಿ ವಿಧಾನಸಭಾ ಉಪಚುನಾವಣೆ 2021

ಏ.17ರಂದು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ರಾಜಕೀಯ ಚಿತ್ರಣದ ಕುರಿತ ಮಾಹಿತಿ ಇಂತಿದೆ.

ಮಸ್ಕಿ ಕ್ಷೇತ್ರದ ಚಿತ್ರಣ ಇಂತಿದೆ
Information about Maski Assembly by-election
author img

By

Published : Apr 9, 2021, 1:26 PM IST

ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಐತಿಹಾಸಿಕ ಸ್ಥಳವೆಂಬ ಖ್ಯಾತಿ ಪಡೆದುಕೊಂಡಿದೆ. ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಖ್ಯಾತಿ ಪಡೆದಿರುವ ಮಸ್ಕಿ ತಾಲೂಕಿಗೆ ಇದೀಗ ಉಪಚುನಾವಣೆ ಎದುರಾಗಿದೆ. ಇದು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾಗಿದೆ.

ಜನಸಂಖ್ಯೆ ವಿವರ:

ಮಸ್ಕಿಯಲ್ಲಿರುವ ಒಟ್ಟು ಮತದಾರರ ಸಂಖ್ಯೆ- 2,06,354

ಮಹಿಳೆಯರು: 1,05,040

ಪುರುಷರು: 1,01,301

ಇತರೆ 13 ಜನ ಮತದಾರರಿದ್ದಾರೆ.

ಮತಗಟ್ಟೆಗಳು:

ಮಸ್ಕಿ ಕ್ಷೇತ್ರದಲ್ಲಿ ಒಟ್ಟು ಮತಗಟ್ಟೆಗಳು 302, ಬೇರೆ ಚುನಾವಣೆ ಸಮಯದಲ್ಲಿ ಇರುವ ಮತಗಟ್ಟೆಗಳು 231, ಕೋವಿಡ್ ಹಿನ್ನೆಲೆಯನ್ನು ಈ ಬಾರಿ ಸುಮಾರು 71 ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ.

ಜಾತಿವಾರು ಮಾಹಿತಿ :

ಮಸ್ಕಿ ವಿಧಾನಸಭಾ ಕ್ಷೇತ್ರದ ಸರಾಸರಿ ಜಾತಿವಾರು ಲೆಕ್ಕಾಚಾರದಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಹೆಚ್ಚಳವಾಗಿದ್ದು, ಸುಮಾರು 52 ಸಾವಿರದಷ್ಟಿದ್ದಾರೆ. ಪರಿಶಿಷ್ಟ ಪಂಗಡ(ಎಸ್ಟಿ)(ನಾಯಕ ಸಮುದಾಯ), 49 ಸಾವಿರ, ಪರಿಶಿಷ್ಟ ಜಾತಿ(ಎಸ್ಸಿ) 45 ಸಾವಿರ, ಮುಸ್ಲಿಂ 14 ಸಾವಿರ, ಕುರುಬರು 15 ಸಾವಿರ, ಬ್ರಾಹ್ಮಣ ಸಮುದಾಯ 2 ಸಾವಿರ, ಲಂಬಾಣಿ( ಬಂಜಾರ) 23 ಸಾವಿರ, ಇತರೆ 2 ಸಾವಿರ ಸಂಖ್ಯೆಯಲ್ಲಿದ್ದಾರೆ.

ಮಸ್ಕಿ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಇದುವರೆಗೂ ಮೂರು ಚುನಾವಣೆಗಳು ನಡೆದಿವೆ. ಮೂರು ಚುನಾವಣೆಗಳಲ್ಲಿ ಪ್ರತಾಪ್ ಗೌಡ ಪಾಟೀಲ್ ಗೆಲುವು ಪಡೆದಿದ್ದಾರೆ.

ರಾಜಕೀಯ ಬದಲಾವಣೆಯಿಂದ ಶಾಸಕ ಸ್ಥಾನಕ್ಕೆ ಪ್ರತಾಪ್ ಗೌಡ ಪಾಟೀಲ್​ ರಾಜೀನಾಮೆ ನೀಡಿದ್ದರು. ಈ ಸಂಬಂಧ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್​​ನಿಂದ ಆರ್.ಬಸವನಗೌಡ ತುರುವಿಹಾಳ ಸ್ಪರ್ಧೆ ಮಾಡಿದ್ದಾರೆ.

ಇದನ್ನೂ ಓದಿ: ನೈಟ್ ಕರ್ಫ್ಯೂ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ: ಡಿ.ಕೆ.ಶಿವಕುಮಾರ್

ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 27 ಗ್ರಾಮ ಪಂಚಾಯಿತಿಗಳಿವೆ. ಇದರಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ -17, ಕಾಂಗ್ರೆಸ್ ಬೆಂಬಲಿತ 06 ಗ್ರಾಪಂ ಅಧಿಕಾರ ಪಡೆದುಕೊಂಡಿವೆ. ನಾಲ್ಕು ಗ್ರಾಪಂಗಳಿಗೆ ಚುನಾವಣೆ ನಡೆದಿವೆ. 14 ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, 10 ಬಿಜೆಪಿ 10, ಕಾಂಗ್ರೆಸ್ 4 ಸದಸ್ಯ ಬಲ ಹೊಂದಿದೆ. ಜಿಲ್ಲಾ ಪಂಚಾಯಿತಿಯ 06 ಸ್ಥಾನಗಳಲ್ಲಿ 4 ಬಿಜೆಪಿ ಸದಸ್ಯರಿದ್ದರೆ, ಕಾಂಗ್ರೆಸ್ಸಿನ ಇಬ್ಬರು ಸದಸ್ಯರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.