ETV Bharat / state

ನಮ್ಮ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್​ನಿಂದಲೇ ಆಗುತ್ತದೆ: ಸಚಿವ ಬೋಸರಾಜು

Minister N S Bosaraju statement: ಜೆಡಿಎಸ್​ ಅವರಿಗೆ ತತ್ವ ಸಿದ್ಧಾಂತಗಳು ಮುಖ್ಯ ಅಲ್ಲ, ಪಕ್ಷ ಮುಖ್ಯ ಎಂದು ಸಚಿವ ಎನ್​ ಎಸ್ ಬೋಸರಾಜು ಹೇಳಿದ್ದಾರೆ.

Minister N.S. Bosaraju
ಸಚಿವ ಎನ್ ಎಸ್ ಬೋಸರಾಜು
author img

By ETV Bharat Karnataka Team

Published : Sep 11, 2023, 5:52 PM IST

Updated : Sep 11, 2023, 6:49 PM IST

ಸಚಿವ ಎನ್ ಎಸ್ ಬೋಸರಾಜು

ರಾಯಚೂರು: ನಮ್ಮ ಪಕ್ಷದಲ್ಲಿ ಏನೇ ಆಗಬೇಕಿದ್ದರೂ ಪಕ್ಷದ ಹೈಕಮಾಂಡ್‌ನಿಂದಲೇ ಆಗುತ್ತೆ ಎಂದು ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಸ್ಥಾನಮಾನ ಸಿಗುತ್ತೆ ಅಂತ ನಿರೀಕ್ಷೆ ಹೊಂದಿದ್ದರು. ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಅಂತ ಮಾತಿತ್ತು, ಏನಾಯ್ತೋ ಗೊತ್ತಿಲ್ಲ. ಅದು ಪಕ್ಷದ್ದೇ ಅಂತಿಮ ತೀರ್ಮಾನವಾಗಿರುತ್ತೆ ಎಂದರು.

ನಮ್ಮ ಪಕ್ಷದಲ್ಲಿ ಯಾರೇ ಮುಖ್ಯಮಂತ್ರಿ ಇರಲಿ, ಯಾರೇ ಪಕ್ಷದ ಅಧ್ಯಕ್ಷರಿರಲಿ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಸಿದ್ದರಾಮಯ್ಯ ಅವರ ಹೆಸರನ್ನು ಅವರು ಎಲ್ಲೂ ನೇರವಾಗಿ ಹೇಳಿಲ್ಲ. ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಸಂಪರ್ಕವಿದೆ. ಹೈಕಮಾಂಡ್ ಜೊತೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಬಿ ಕೆ ಹರಿಪ್ರಸಾದ್ ಭಾಷಣದಲ್ಲಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ ಅಂತ ಕೆಲವರು ತಿಳಿದುಕೊಂಡಿರಬಹುದು. ಅವರು ಯಾವುದೇ ನಾಯಕರ ಹೆಸರನ್ನು ನೇರವಾಗಿ ಬಳಸಿ ಮಾತನಾಡಿಲ್ಲ. ಹಿಂದುಳಿದ ವರ್ಗಗಳ ಸಭೆ ಮಾಡಿದ್ದಾರೆ. ಅಷ್ಟು ಬಿಟ್ಟರೆ ಪಕ್ಷದ ಬಗ್ಗೆ, ಪಕ್ಷದ ನಾಯಕರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸಮಸ್ಯೆಯಿದ್ದರೆ ಹೈಕಮಾಂಡ್ ಸರಿಪಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ಜಿ ಪರಮೇಶ್ವರ್​ ಅವರಿಗೆ ಸಿಎಂ ಸ್ಥಾನ ತಪ್ಪಿಸುವಂತಹ ಯಾವುದೇ ಪ್ರಶ್ನೆಯೇ ಬರುವುದಿಲ್ಲ. ಸ್ಥಿತಿಗತಿ ನೋಡಿಕೊಂಡು ಹೈಕಮಾಂಡ್​ನಿಂದ ಸಿಎಂ ಆಯ್ಕೆ ಆಗಿರುತ್ತದೆ. ಹರಿಪ್ರಸಾದ್​ ಅವರ ಅಸಮಾಧಾನವನ್ನು ಹೈಕಮಾಂಡ್ ಸರಿಪಡಿಸುತ್ತದೆ. ಇದು ಮುಂದುವರೆಯಲ್ಲ ಎಂದು ಸಚಿವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರ, ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ 123 ಟಾರ್ಗೆಟ್ ಇಟ್ಟಿದ್ದರು. ಬಂದಿರುವುದು 19 ಸೀಟು, ಪಕ್ಷ ಉಳಿಯುವುದಕ್ಕಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಅಂತ ದೇವೆಗೌಡರು ಹೇಳಿದ್ದಾರೆ. ಪಕ್ಷದ ಉಳಿವಿಗಾಗಿ ಮೋದಿಯವರ ಜೊತೆ ಮಾತನಾಡಿದ್ದೇನೆ ಅಂತಲೂ ಹೇಳಿದ್ದಾರೆ. ತತ್ವಸಿದ್ಧಾಂತಗಳು ಅವರಿಗೆ ಮುಖ್ಯ ಅಲ್ಲ, ಪಕ್ಷ ಮುಖ್ಯ. ಪ್ರತಿ ಬಾರಿ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಾಗ ಬಿಜೆಪಿ ಜೊತೆ ಸೇರಿದರು. ನಮ್ಮ ಜೊತೆ ಸೇರಿದ್ದರು. ಈಗ ಪುನಃ ಬಿಜೆಪಿ ಜೊತೆ ಸೇರುತ್ತಿದ್ದಾರೆ ಎಂದು ಹೇಳಿದರು.

ಸನಾತನ ಧರ್ಮ ವಿಚಾರದ ಕುರಿತು ಮಾತನಾಡಿದ ಸಚಿವ ಬೋಸರಾಜು, ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳಿಗೂ ಗೌರವ ಕೊಡುವಂತದ್ದು, ಎಲ್ಲಾ ಧರ್ಮದವರು ನಮ್ಮ ಪಕ್ಷದಲ್ಲಿದ್ದಾರೆ. ಪ್ರಾದೇಶಿಕ ಪಕ್ಷದವರು ಅವರ ರಾಜ್ಯದ ಸ್ಥಿತಿಗತಿಗಳ ಆಧಾರದ ಮೇಲೆ ಮಾತನಾಡಿರಬಹುದು. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ನಮ್ಮ ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಿದ್ದಾರೆ ಎಂದರು.

ಇದನ್ನೂ ಓದಿ: ಹಗರಣಗಳಿಂದ ಪಾರಾಗಲು ‌ನನ್ನ ವಿರುದ್ಧ ಹೈಕಮಾಂಡ್​​ಗೆ ದೂರು: ಬಿ ಕೆ ಹರಿಪ್ರಸಾದ್

Last Updated : Sep 11, 2023, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.