ರಾಯಚೂರು : ಬಾಲಕಿ ಮೇಲೆ ಹಲೋ ಬ್ರಿಕ್ಸ್ ಎಸೆದು ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಶಿಯಾಹಾಳ ತಾಂಡದಲ್ಲಿ ನಡೆದಿದೆ. ಚಿನ್ನಮ್ಮ ರವಿಕುಮಾರ್ ನಾಯಕ (4) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಅದೇ ಗ್ರಾಮದ ಲಕಾಪತಿ ನಾಯಕ ಕೊಲೆ ಮಾಡಿರುವ ಆರೋಪಿ ಎಂದು ಹೇಳಲಾಗುತ್ತಿದೆ.
ಮನೆಯ ಮುಂದೆ ಬಾಲಕಿ ಚಿನ್ನಮ್ಮಗೆ ಅಲ್ಲಿಯೇ ಇದ್ದ ಹಲೋ ಬ್ರಿಕ್ಸ್ (ಸಿಮೆಂಟ್‌ನಿಂದ ತಯಾರಿಸಿದ ಎಳೆ)ನನ್ನು ಬಾಲಕಿ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿದ್ದ ಮಗನಿಗೆ ಬ್ಯಾಗ್ನಲ್ಲಿ ಡ್ರಗ್ಸ್ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ!