ETV Bharat / state

ರಾಯಚೂರಲ್ಲಿ ವರುಣನ ರುದ್ರನರ್ತನ: ಬಡಾವಣೆಗಳು ಜಲಾವೃತ

ಬಿಸಿಲಿನಿಂದ ಕಾದು ಕೆಂಡವಾಗುತ್ತಿದ್ದ ರಾಯಚೂರು ನಗರ ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೀರೂರಾಗಿ ಪರಿವರ್ತನೆಯಾಗಿದೆ. ಎಡೆಬಿಡದೇ ಸುರಿದ ಮಳೆಗೆ ಜನರು ನಲುಗಿ ಹೋಗಿದ್ದಾರೆ.

heavy rain in Raichur
ಜಲಾವೃತ
author img

By

Published : Sep 26, 2020, 6:21 PM IST

ರಾಯಚೂರು: ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಅಕ್ಷರಶಃ ರಾಯಚೂರು ನಗರ ತತ್ತರಿಸಿದೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿ ಸಂಪೂರ್ಣ ಜನ - ಜೀವನ ಅಸ್ತವ್ಯಸ್ತಗೊಳಿಸಿ, ವಾಸಿಸಲು ನೆಲೆ ಇಲ್ಲದಂತೆ ಮಾಡಿದೆ.

ಜವಾಹರನಗರ ಸೇರಿದಂತೆ ನಾನಾ ಕಡೆ ಬಡಾವಣೆಗಳೇ ಜಲಾವೃತ

ನಗರದ ಸಿಯಾತಲಾಬ್, ಜಲಾಲನಗರ, ಜಹಿರಬಾದ್, ದೇವಿನಗರ, ಬಸವನಭಾವಿ ಚೌಕ್, ಮ್ಯಾದರ್ ಓಣಿ, ಜವಾಹರನಗರ ಸೇರಿದಂತೆ ನಾನಾ ಕಡೆ ಬಡಾವಣೆಗಳೇ ಜಲಾವೃತವಾಗಿವೆ. ಸಿಯಾತಲಾಬ್ ಬಡಾವಣೆಯ ಬಹುತೇಕ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿನ ದವಸ - ಧಾನ್ಯಗಳು, ಗೃಹೋಪಯೋಗಿ ಸಾಮಗ್ರಿಗಳು, ಪಿಠೋಪಕರಣಗಳು ನೀರು ಪಾಲಾಗಿ ನೆಲಸಲು ನೆಲವಿಲ್ಲದೇ ನೀರಿಲ್ಲನಲ್ಲೇ ಕಾಲ ಕಳೆಯುವಂತೆ ಮಾಡಿದೆ. ಮನೆಯಿಂದ ನೀರು ಹೊರಹಾಕುವುದರಲ್ಲೇ ಜನ ರಾತ್ರಿ ಕಳೆದಿದ್ದಾರೆ.

ಧಾರಾಕಾರ ಮಳೆಯಿಂದಾಗಿ ನಿನ್ನೆ ರಾತ್ರಿಯಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ನಾನಾ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮನೆಗಳು ಕುಸಿದು ಬಿದ್ದಿವೆ. ಈ ಹಿಂದೆಯೇ ಸುರಿದ ಭಾರಿ ಮಳೆಯಿಂದ ಅನೇಕ ಕಡೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆಗ ನಗರಸಭೆ, ಜಿಲ್ಲಾಡಳಿತ ನೀರು ಹರಿದು ಹೋಗುವಂತೆ ವ್ಯವಸ್ಥೆ ಕೈಗೊಳ್ಳಬೇಕಾಗಿತ್ತು. ಆದ್ರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಪುನಃ ರಾಯಚೂರು ನಗರದ ಅನೇಕ ಬಡಾವಣೆಗಳು ನೀರಿನಲ್ಲಿ ಮುಳುಗುವಂತೆ ಮಾಡಿದೆ.

ಜಿಲ್ಲೆಯ ಮಾನವಿ ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದೆ. ನೀರಿನ ತೇವಾಂಶದಿಂದ ಗೋಡೆ ಕುಸಿದು ಬಿದ್ದಿದೆ ಪರಿಣಾಮ ನಾಲ್ಕು ಕುರಿಮರಿಗಳು ಮೃತಪಟ್ಟಿದ್ದು, ಕುಟುಂಬದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇನ್ನು ರೈಲ್ವೆ ನಿಲ್ದಾಣ ಬಳಿಯ ಹೈವೇ ರಸ್ತೆ ಆರ್ ಟಿಒ ಸರ್ಕಲ್ ನಿಂದ ನೀರು ಹರಿದು ಬಂದು, ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತು. ಬಸನಭಾವಿ ಚೌಕ್, ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ಸರ್ಕಲ್ ತೆರಳುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಈ ಹಿನ್ನೆಲೆ ನಗರಸಭೆ, ಜಿಲ್ಲಾಡಳಿತಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಇದರ ಮಧ್ಯೆಯೇ ವಾಹನ ಸವಾರರು, ಪಾದಚಾರಿಗಳು ಹೋಗಲು ಹರಸಾಹಸ ಪಟ್ರು.

ಮಳೆಯಿಂದ ಆಗಿರುವ ಪ್ರಮಾದವನ್ನ ಖುದ್ದಾಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಭೇಟಿ ನೀಡುವ ಪರಿಶೀಲನೆ ನಡೆಸಿದ್ರು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ತಲೆದೂರದಂತೆ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.