ETV Bharat / state

ಆರೋಗ್ಯಕ್ಕಾಗಿ ವೃದ್ಧ ದಂಪತಿಯಿಂದ ವಿಶೇಷ ಪ್ರಾರ್ಥನೆ; ಹರಕೆ ತೀರಿಸಲು ಗುಜರಾತ್‌ನಿಂದ-ತಿರುಪತಿಗೆ ಪಾದಯಾತ್ರೆ - ಗುಜರಾತ್ ವೃದ್ಧ ದಂಪತಿಯ ಪಾದಯಾತ್ರೆ

ಆರೋಗ್ಯ ಸರಿಪಡಿಸುವಂತೆ ಪ್ರಾರ್ಥಿಸಿ ಗುಜರಾತ್ ಮೂಲದ ಈ ವೃದ್ಧ ದಂಪತಿ ತಿರುಮಲ ವೆಂಕಟೇಶ್ವರ ಸ್ವಾಮಿಯಲ್ಲಿ ವಿಶೇಷ ಹರಕೆ ಕಟ್ಟಿಕೊಂಡಿದ್ದರಂತೆ. ಕಾಲಾ ನಂತರದಲ್ಲಿ ತಮ್ಮ ಪ್ರಾರ್ಥನೆ ಫಲಿಸಿದ್ದು ಸ್ವಾಮಿಯ ದರ್ಶನಕ್ಕೆಂದು ಇದೀಗ ಸಾವಿರಾರು ಕಿಲೋ ಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿ, ಹರಕೆ ತೀರಿಸಲು ತೆರಳುತ್ತಿದ್ದಾರೆ.

gujurath couple hiking
ವೃದ್ಧ ದಂಪತಿಯ ಪಾದಯಾತ್ರೆ
author img

By

Published : Aug 10, 2021, 7:21 AM IST

Updated : Aug 10, 2021, 8:18 AM IST

ರಾಯಚೂರು: ದೃಷ್ಠಿದೋಷದಿಂದ ಬಳಲುತ್ತಿದ್ದು 5 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಗುಜರಾತ್‌ ಮೂಲದ ಪ್ರಮೋದ್ ಎಂಬವರು ತನ್ನ ಹಾಗೂ ಪತ್ನಿಯ ಆರೋಗ್ಯ ಸುಧಾರಣೆಗೆ ತಿರುಮಲ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ ವಿಶೇಷ ಹರಕೆ ಕಟ್ಟಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ಕಾಲಾನಂತರದಲ್ಲಿ ಇವರ ಆರೋಗ್ಯ ಸುಧಾರಣೆ ಕಂಡಿದೆಯಂತೆ. ಇದೀಗ ಹರಕೆ ತೀರಿಸಲು ವೃದ್ಧ ದಂಪತಿ ಹೊರಟಿದ್ದಾರೆ. ಅದೂ ಕೂಡಾ ದೂರದ ಗುಜರಾತ್‌ನಿಂದ ಪಾದಯಾತ್ರೆಯ ಮೂಲಕವೇ ತಿರುಪತಿಗೆ ತೆರಳುತ್ತಿರುವ ಇವರು ಸದ್ಯ ರಾಯಚೂರು ತಲುಪಿದ್ದಾರೆ.

ವೃದ್ಧ ದಂಪತಿಯ ಪಾದಯಾತ್ರೆ

ಗುಜರಾತ್​ನ ತಮ್ಮ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ ಈ ದಂಪತಿ ನಿನ್ನೆ ರಾಯಚೂರಿ ತಲುಪಿದರು. ಈ ವೃದ್ಧ ದಂಪತಿಗೆ 75 ವರ್ಷ ವಯಸ್ಸಾಗಿದೆ. ಇಷ್ಟಿದ್ದರೂ ಪ್ರತಿನಿತ್ಯ 25ರಿಂದ 28 ಕಿಲೋ ಮೀಟರ್‌ವರೆಗೆ ಕಾಲ್ನಡಿಗೆ ಪಯಾಣ ಮಾಡುತ್ತಿದ್ದಾರೆ. ಈವರೆಗೆ 2,219 ಕಿ.ಮೀ.ವರೆಗೆ ಪಾದಯಾತ್ರೆ ಮುಗಿಸಿದ್ದಾರೆ.

ಇದನ್ನೂ ಓದಿ: ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೊರೊನಾ ಸಂಕಷ್ಟ; 3ನೇ ಅಲೆ ತಡೆಗೆ ಈಗಿನಿಂದಲೇ ಪ್ರಯತ್ನ; ಸಿಎಂ

ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಯಾತ್ರೆ ಇನ್ನೂ ಮೂರುವರೆ ತಿಂಗಳು ನಡೆಯಬಹುದು. ಯಾತ್ರೆ ಆರಂಭದಿಂದ ಮುಗಿಯುವರೆಗೆ ಏಳು ತಿಂಗಳು ಆಗಬಹುದು ಎಂದು ಪ್ರಮೋದ್​ ಹೇಳುತ್ತಾರೆ.

Last Updated : Aug 10, 2021, 8:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.