ರಾಯಚೂರು: ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ತಾಲೂಕು, ಗ್ರಾಮಗಳಲ್ಲಿ ಶಿರಸ್ತೆದಾರರನ್ನು ನೇಮಕ ಮಾಡಲಾಗಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಾಗಿ ನೀರು ಬಿಡಲಾಗಿದೆ. ಈ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಅಲ್ಲದೇ ಸಂಘ, ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯ ಧನ ನೀಡಲು ಅನುಕೂಲ ಮಾಡಿಕೊಟ್ಟಿದ್ದು. ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ. ಅಲ್ಲದೇ ಸಿಎಂ ಖಾತೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ.