ರಾಯಚೂರು: ಬೆಂಗಳೂರಿನಿಂದ ಸಿಂಧನೂರಿಗೆ ನಡೆದುಕೊಂಡು ಬರುವ ವೇಳೆ ಮೃತಪಟ್ಟ ಕಟ್ಟಡ ಕಾರ್ಮಿಕೆ ದಿ. ಗಂಗಮ್ಮನವರ ಇಬ್ಬರು ಮಕ್ಕಳಿಗೆ ಮೂರು ಲಕ್ಷ ರೂಪಾಯಿ ಭದ್ರತಾ ಠೇವಣಿ ಬಾಂಡ್ ನೀಡಲಾಯಿತು.
![ದಿ.ಗಂಗಮ್ಮ ಮಕ್ಕಳಿಗೆ ಮೂರು ಲಕ್ಷ ರೂ. ಭದ್ರತಾ ಠೇವಣಿ ನೀಡಿದ ಸರ್ಕಾರ](https://etvbharatimages.akamaized.net/etvbharat/prod-images/kn-rcr-04-bond-vitarane-photo3-7202440_30042020164153_3004f_1588245113_1013.jpeg)
ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಕಟ್ಟಡ ಕಾರ್ಮಿಕೆ ದಿ.ಗಂಗಮ್ಮನವರ ಮಕ್ಕಳಾದ ಮಗ ಮಂಜುನಾಥ ಮಗಳು ಪ್ರೀತಿ ಇಬ್ಬರಿಗೆ ತಲಾ 1.5 ಲಕ್ಷ ರೂಪಾಯಿಯಂತೆ ಮೂರು ಲಕ್ಷ ಮೌಲ್ಯದ ಬಾಂಡ್ನನ್ನು ನೀಡಲಾಗಿದೆ. ಗಂಗಮ್ಮ ಕಟ್ಟಡ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದಳು.
ಆದ್ರೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಿಂದಾಗಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದರು. ತಮ್ಮ ಊರಿಗೆ ತೆರಳಲು ಬಸ್, ರೈಲು ಸಂಚಾರ ಇಲ್ಲದ ಕಾರಣ ಬೆಂಗಳೂರಿನಿಂದ ಸಿಂಧನೂರಿಗೆ ನಡೆದುಕೊಂಡು ಬರುವಾಗ ಮಾರ್ಗ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಇದರಿಂದ ಇಬ್ಬರು ಮಕ್ಕಳು ತಾಯಿಯನ್ನ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದರು.
![ದಿ.ಗಂಗಮ್ಮ](https://etvbharatimages.akamaized.net/etvbharat/prod-images/7004019_1075_7004019_1588246973411.png)
ಆಗ ಸಿಐಟಿಯು ಸಂಘಟನೆ ಗಂಗಮ್ಮ ಕುಟುಂಬಕ್ಕೆ ಸರ್ಕಾರ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ಒತ್ತಾಯಿಸಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಇಬ್ಬರು ಮಕ್ಕಳಿಗೆ 2 ವರ್ಷ ಅವಧಿಗೆ ತಲಾ ಒಂದೂವರೆ ಲಕ್ಷ ರೂಪಾಯಿಯಂತೆ, ಮೂರು ಲಕ್ಷ ರೂಪಾಯಿ ಭದ್ರತಾ ಠೇವಣಿ ಬಾಂಡ್ ನೀಡಿದೆ.
ಈ ಬಾಂಡ್ ಅನ್ನು ಸಿಂಧನೂರು ತಹಶೀಲ್ದಾರ್ ಮಂಜುನಾಥ, ಕಾರ್ಮಿಕ ನಿರೀಕ್ಷಕ ಶಿವಶಂಕರ್ ಬಿ. ತಳವಾರ ಹಾಗೂ ಇತರೆ ಅಧಿಕಾರಿಗಳು ದಿ.ಗಂಗಮ್ಮ ಮನೆಗೆ ತೆರಳಿ ನೀಡಿದ್ರು.