ರಾಯಚೂರು: ಬೆಲೆ ಏರಿಕೆ ಹಾಗೂ ಕೊರೊನಾ ಹಾವಳಿ ನಡುವೆಯೂ ಗಣೇಶ ಚತುರ್ಥಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಮಾರಾಟ ಜೋರಾಗಿ ನಡೆದಿದ್ದು, ಗಣೇಶನನ್ನು ಅದ್ಧೂರಿಯಾಗಿ ಪೂಜಿಸಲು ಜನರು ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ಹೂವು-ಹಣ್ಣುಗಳ ಮಾರಾಟ ಜೋರಾಗಿದ್ದು, ಬೆಲೆ ಏರಿಕೆಯ ನಡುವೆಯೂ ಖರೀದಿ ಮಾಡಿ ಜನ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತಿದ್ದು, ಹೂವು, ಹಣ್ಣುಗಳ ಮಾರಟಗಾರರ ಮುಖದಲ್ಲಿ ಹಬ್ಬದ ಖುಷಿ ಮೂಡಿದೆ.
ಗ್ರಾಹಕ ನಾರಾಯಣ ರಾವ್ ಈಟಿವಿ ಭಾರತದೊಂದಿಗೆ ಮಾತನಾಡಿ, ಪತೀ ವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು, ಗಣೇಶ ಮೂರ್ತಿಗಳು ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಬೆಲೆ ಏರಿಕೆಯ ನಡುವೆಯೂ ಸಂಭ್ರಮದಿಮದ ಹಬ್ಬ ಆಚರಿಸುತ್ತಿದ್ದೇವೆ ಎಂದರು.