ರಾಯಚೂರು : ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ತಂದೆ-ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಳಿ ನಡೆದಿದೆ.

ದುರ್ಗಾ ಪ್ರಸಾದ್(46), ವಿದ್ಯಾ(9) ಎಂಬುವರು ಮೃತ ದುರ್ದೈವಿಗಳು. ಇಂದು ದುರ್ಗಾ ಪ್ರಸಾದ್ ಕುಟುಂಬ ಅಂಬಾಮಠದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದರು.
ಈ ವೇಳೆ ಅಪಘಾತ ಸಂಭವಿಸಿ ದುರ್ಗಾಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇನ್ನು, ಮೃತ ದುರ್ಗಾ ಪ್ರಸಾದ್ ಅಂಬಾಮಠ ಶ್ರೀಅಂಬಾದೇವಿಯ ದೇವಾಲಯದ ಆರ್ಚಕರಾಗಿದ್ದರು.

ಘಟನೆಯಲ್ಲಿ ದುರ್ಗಾ ಪ್ರಸಾದ್ ಪತ್ನಿ ವೀಣಾ ಹಾಗೂ ಚಾಲಕ ತೀವ್ರ ಗಾಯಗೊಂಡಿದ್ದು, ಬಳ್ಳಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಸ್ಥಳಕ್ಕೆ ಬಳಗಾನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯಕ್ಷ ಪ್ರಶ್ನೆಯಾದ ಚಿರು, ವಿಜಯ್, ಪುನೀತ್ ಜನ್ಮ ದಿನಾಂಕ: ಚಂದನವನಕ್ಕೆ '17'ರ ಕಂಟಕ