ETV Bharat / state

ಕೋಚಿಂಗ್‌ ಇರದಿದ್ರೂ ಪಿಎಸ್ಐ ಪರೀಕ್ಷೆಯಲ್ಲಿ 29ನೇ ರ‍್ಯಾಂಕ್ ಪಡೆದ ರೈತನ ಮಗಳು!! - raichuru today news

ಧಾರವಾಡ ವಿವಿಯಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದು ಪಿಎಸ್​ಐ ಹುದ್ದೆ ಆಯ್ಕೆಗೆ ತಯಾರಿ ನಡೆಸಿದ್ದರು. ಮೊದಲಿನಿಂದಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಭಿಲಾಷೆ ಹೊಂದಿದ್ದರು. ಆ ಕನಸೀಗ ಈಡೇರಿದೆ..

Durgabhavani got 29th rank in psi exam
ಶ್ರೀನಿವಾಸ ಕ್ಯಾಂಪ್​ನ ದುರ್ಗಾಭವಾನಿ
author img

By

Published : Sep 15, 2020, 6:51 PM IST

ರಾಯಚೂರು : ಪಿಎಸ್​ಐ ಮಹಿಳಾ ನೇಮಕಾತಿ ಪಟ್ಟಿಯಲ್ಲಿ ದುರ್ಗಾಭವಾನಿ 29ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಿಎಸ್​ಸಿ ಅಗ್ರಿ ಕೃಷಿ ಪದವಿಧರೆ ದುರ್ಗಾಭವಾನಿ, ಸಿಂಧನೂರು ತಾಲೂಕಿನ ಶ್ರೀನಿವಾಸ ಕ್ಯಾಂಪ್‌ನ ರೈತ ರಾಮಕೃಷ್ಣ ಉಪಲಪಾಟಿ ಎಂಬುವರ ಪುತ್ರಿ.

Durgabhavani got 29th rank in psi exam
ಶ್ರೀನಿವಾಸ ಕ್ಯಾಂಪ್​ನ ದುರ್ಗಾಭವಾನಿ

1ರಿಂದ 10ನೇ ತರಗತಿಯವರೆಗೆ ಸಿಂಧನೂರಿನ ವಿಕಾಸ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಬ್ಯಾಸ ಮುಗಿಸಿ, ಪಿಯುಸಿ ವ್ಯಾಸಂಗವನ್ನು ಡಾ ಫಡಿಲ್ಸ್ ಕಾಲೇಜಿನಲ್ಲಿ ಮುಗಿಸಿದ್ದಾರೆ.

ಧಾರವಾಡ ವಿವಿಯಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದು ಪಿಎಸ್​ಐಗೆ ತಯಾರಿ ನಡೆಸಿದ್ದರು. ಮೊದಲನಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಭಿಲಾಷೆ ಹೊಂದಿದ್ದ ದುರ್ಗಾಭವಾನಿ, ಯಾವುದೇ ಕೋಚಿಂಗ್ ಕೂಡ ತೆಗೆದುಕೊಳ್ಳದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.

ಮಗಳು ಪಿಎಸ್ಐ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ತಂದೆ ರಾಮಕೃಷ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.