ರಾಯಚೂರು: ಕಡಿಮೆ ದರದಲ್ಲಿ ಜನರಿಗೆ ಔಷಧಿ ಮಾರಾಟ ಮಾಡಬೇಕಾದ ಜನೌಷಧಿ ಕೇಂದ್ರದಲ್ಲಿ ಖಾಸಗಿ ಮೆಡಿಕಲ್ಗಳಲ್ಲಿ ಮಾರಾಟವಾಗುವ ಔಷಧಿಗಳು ಮಾರಾಟ ಮಾಡುತ್ತಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಿಂಧನೂರು ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರದಲ್ಲಿ ಖಾಸಗಿ ಮೆಡಿಕಲ್‌ನಲ್ಲಿ ಮಾರಾಟ ಮಾಡುವಂತಹ ಔಷಧಿಗಳು ಜನೌಷಧಿ ಮಾರಾಟ ಮಳಿಗೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಮಳಿಗೆಗೆ ಬರುವಂತಹ ಗ್ರಾಹಕರಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡಬೇಕಿತ್ತು. ಆದರೆ ಅಕ್ರಮವಾಗಿ ಖಾಸಗಿ ದರದಲ್ಲಿ ಮಾರಾಟ ಮಾಡುವಂತಹ ಔಷಧಿಗಳನ್ನ ಗ್ರಾಹಕರಿಗೆ ನೀಡುತ್ತಿರುವುದು ಬಯಲಾಗಿದೆ.
ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲ ವೈದ್ಯರು ಈ ಔಷಧಿಗಳನ್ನು ತೆಗೆದುಕೊಳ್ಳುವಂತೆ ಚೀಟಿ ಬರೆದು ಕೊಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಆಗಾಗ ದೂರು ಸಹ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ನಾಡಗೌಡ ಜನೌಷಧಿ ಮಳಿಗೆಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇಂದು ದೂರಿನ ಮೇಲೆ, ಸದ್ಯ ದೊರಕಿರುವ ಖಾಸಗಿ ಔಷಧಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.