ETV Bharat / state

ಬಿತ್ತನೆ ಬೀಜ ವಿತರಣೆಯಲ್ಲಿ ಕಡಿತ... ಆತಂಕದಲ್ಲಿ ಅನ್ನದಾತ

ಪ್ರಸಕ್ತ ಸಾಲಿನಲ್ಲಿ ಸರ್ಕರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎನ್ನುವ ಆದೇಶವಿದೆ. ಆದ್ರೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳೇ ತಿಳಿಸಿರುವುದು ಅಚ್ಚರಿ ಮುಡಿಸಿದೆ.

ಆತಂಕದಲ್ಲಿ ಅನ್ನದಾತ
author img

By

Published : Jun 14, 2019, 8:39 AM IST

Updated : Jun 14, 2019, 9:04 AM IST

ರಾಯಚೂರು: ಈ ಹಿಂದೆ ಸರ್ಕಾರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಎಕರೆ ಜಮೀನಿಗೆ 5 ಕೆ.ಜಿ. ತೂಕದ ಒಂದು ಪ್ಯಾಕೇಟ್​ನಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನ ವಿತರಣೆ ಮಾಡುತ್ತಿತ್ತು. ಪ್ರಸಕ್ತ ಮುಂಗಾರು ಹಂಗಾಮಿಗೆ ಸಬ್ಸಿಡಿ ಬೀಜ ವಿತರಣೆಯ ತೂಕದಲ್ಲಿ ಕತ್ತರಿ ಪ್ರಯೋಗ ಮಾಡಲು ಮುಂದಾಗಿದ್ದು, ರೈತರಿಗೆ ಆತಂಕ ಎದುರಾಗಿದೆ.

ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರತಿ ಎಕರೆಗೆ 5 ಕೆ.ಜಿ.ಯಂತೆ ಸುಮಾರು 25 ಕೆ.ಜಿ.ವರೆಗೆ ಬೀಜ ವಿತರಣೆ ಮಾಡಲಾಗುತ್ತಿತ್ತು. ಆದ್ರೆ, ಇದೀಗ ಎಕರೆಗೆ ಶೇ.33ರಷ್ಟು ಮಾತ್ರ ಬೀಜ ವಿತರಣೆ ಮಾಡುವುದಕ್ಕೆ ಮುಂದಾಗಿದೆಯಂತೆ. ಸರ್ಕಾರದ ಈ ನಿಯಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿತ್ತನೆ ಬೀಜ ವಿತರಣೆಯಲ್ಲಿ ಕಡಿತ, ಅನ್ನದಾತರಿಗೆ ಶಾಕ್​

ಎಕರೆಗೆ ಶೇ.33ರಷ್ಟು ಬಿತ್ತನೆ ಬೀಜ ವಿತರಿಸಬೇಕು ಎನ್ನುವ ನಿಯಮ ಹೊಸದೇನಲ್ಲ. ಮೊದಲಿನಿಂದಲೂ ಈ ನಿಯಮವಿದ್ರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ. ಆದ್ರೆ ಈ ಬಾರಿ ಸರ್ಕಾರ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ. ಈ ಮೊದಲು 5 ಎಕರೆ ಜಮೀನಿಗೆ 25 ಕೆ.ಜಿ.ಯ ಪ್ಯಾಕೇಟ್​ನ್ನು​ ರೈತರಿಗೆ ನೀಡಲಾಗುತ್ತಿತ್ತು. ಆದ್ರೆ ಇದೀಗ ಅದನ್ನು ಕಡಿತಗೊಳಿಸಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಸರ್ಕರ ನಿಯಮವನ್ನ ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎನ್ನುವ ಆದೇಶದ ಮೇರೆಗೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ರಾಯಚೂರು ಜಿಲ್ಲೆಯಲ್ಲಿ 3,32,033 ಭೂ ಹಿಡುವಳಿದಾರರಿದ್ದರೆ, ಇದರಲ್ಲಿ 1,11,859 ಸಣ್ಣ ಮತ್ತು 1,01,422 ಅತಿ ಸಣ್ಣ ಭೂ ಹಿಡುವಳಿದಾರರಿದ್ದು, 38,690 ಕ್ವಿಂಟಾಲ್ ಬಿತ್ತನೆ ಜಿಲ್ಲೆಗೆ ಅವಶ್ಯಕತೆಯಿದೆ. ಸರ್ಕಾರದಿಂದ ಪ್ರಸ್ತುತ 8,677 ಕ್ವಿಂಟಾಲ್ ಸರಬರಾಜು ಆಗಿದೆ. ಈ ಸಂಬಂಧ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಸ್ಲಗ್: ಶೇ.33 ರಷ್ಟು ಸಬ್ಸಿಡಿ ಬೀಜ ವಿತರಣೆ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 14-೦6-2019
ಸ್ಥಳ: ರಾಯಚೂರು
ಆಂಕರ್: ಸರಕಾರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನ ವಿತರಣೆ ಮಾಡಿಕೊಂಡು ಬರುತ್ತಿದೆ. ಎಕರೆ ಜಮೀನಿಗೆ 5 ಕೆ.ಜಿ. ತೂಕದ ಒಂದು ಪ್ಯಾಕೇಟ್ ನಂತೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನ ವಿತರಣೆ ಮಾಡಲಾಗುತ್ತಿತ್ತು. ಪ್ರಸಕ್ತ ಮುಂಗಾರು ಹಂಗಾಮಿಗೆ ಸಬ್ಸಿಡಿ ಬೀಜ ವಿತರಣೆಯಲ್ಲಿ ತೂಕದಲ್ಲಿ ಕತ್ತರಿ ಪ್ರಯೋಗ ಮಾಡಲು ಮುಂದಾಗಿದ್ದು, ರೈತರಿಗೆ ಆತಂಕ ಎದುರಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ ೧: ರಾಜ್ಯ ಸರಕಾರ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ ಸಬ್ಸಿಡಿ ದರದಲ್ಲಿ ಬೀಜಗಳನ್ನ ಕೃಷಿ ಇಲಾಖೆಯ ಅಧಿನದಲ್ಲಿ ಬರುವ ರೈತ ಸಂಪರ್ಕ ಕೇಂದ್ರಗಳಿಂದ ವಿತರಣೆ ಮಾಡುತ್ತಿದೆ. ಪ್ರತಿ ಎಕರೆಗೆ 5 ಕೆ.ಜಿ.ಯಂತೆ ಸುಮಾರು 25 ಕೆ.ಜಿ.ಯವರಿಗೆ ಬೀಜ ವಿತರಣೆ ಮಾಡಿಕೊಂಡು ಬರುತ್ತಿತ್ತು. ಆದ್ರೆ ಇದೀಗ ಎಕರೆಗೆ ಶೇ.33%ರಷ್ಟು ಮಾತ್ರ ಬೀಜ ವಿತರಣೆ ಮಾಡುವುದಕ್ಕೆ ಸರಕಾರ ಮುಂದಾಗಿದೆ. ಸರಕಾರದ ಈ ನಿಯಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಯ್ಸ್ ಓವರ್.2: ಇನ್ನು ಎಕರೆಗೆ ಶೇ.33%ರಷ್ಟು ಬಿತ್ತನೆ ಬೀಜ ವಿತರಣೆ ಮಾಡಬೇಕು ಎನ್ನುವ ನಿಯಮ ಹೊಸದೇನುಲ್ಲ. ಮೊದಲಿನಿಂದಲೂ ಈ ನಿಯಮವಿದ್ರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ. ಆದ್ರೆ ಈ ಬಾರಿ ಸರಕಾರ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗಿದೆ. ಈ ಮೊದಲು 5 ಎಕರೆಗೆ ಹೊಲಕ್ಕೆ 25 ಕೆ.ಜಿ.ಯ ಐದು ಪಾಕೇಟ್ ರೈತರಿಗೆ ನೀಡಲಾಗುತ್ತಿತ್ತು. ಆದ್ರೆ ಇದೀಗ 5 ಎಕರೆ 3 ಪಾಕೇಟ್ ಗಳನ್ನು ಮಾತ್ರ ವಿತರಣೆಯಾಗುತ್ತಿದೆ. ಉಳಿದ ಶೇ.67%ರಷ್ಟು ಬೀಜವನ್ನ ತಾವು ಬೆಳದಂತಹ ಬೆಳೆಯನ್ನ ಬಿತ್ತನೆಗೆ ಬೇಕಾದಷ್ಟು ಬೀಜ ಮಾಡಲು ಸಂಗ್ರಹಿಸಿಕೊಂಡು ಬಿತ್ತನೆ ಮಾಡಿಕೊಳ್ಳಬೇಕಾಗಿದೆ. ಈ ನಿಯಮ ಮೊದಲಿನಂದಲೂ ಇತ್ತದರೂ ಕಟ್ಟುನಿಟ್ಟಾಗಿ ಜಾರಿಗೆ ಬಂದಿರಲಿಲ್ಲ. ಆದ್ರೆ ಪ್ರಸಕ್ತ ಸಾಲಿನಲ್ಲಿ ಸರಕಾರ ನಿಯಮವನ್ನ ಪರಿಣಾಮಕಾರಿ ಜಾರಿ ಮಾಡಬೇಕು ಎನ್ನುವ ಆದೇಶದ ಮೆರಗೆ ಶೇ.33ರಷ್ಟು ಮಾತ್ರ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ವಾಯ್ಸ್ ಓವರ್.3: ಇನ್ನು ಹಳೆ ಕೃಷಿಕರು ತಾವು ಬೆಳೆದಂತಹ ಬೆಳೆಯನ್ನ ಮುಂದಿನ ಬೆಳೆಗೆ ಬಿತ್ತನೆಗಾಗಿ ಸಂಗ್ರಹಿಸಿ ಇರಿಸಿಕೊಳ್ಳುವಂತಹ ಪದ್ದತಿಯಿತ್ತು. ಆದ್ರೆ ಕೆಲವು ರೈತರು ಹೊರತು ಪಡಿಸಿದ್ದಾರೆ, ಬಹುತೇಕ ರೈತರು ಈ ಪದ್ದತಿಯನ್ನ ಕೈಬಿಟ್ಟುದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರು ಸಬ್ಸಿಡಿ ದರದಲ್ಲಿ ಸಿಗುವ ಬೀಜಗಳ ಮೇಲೆ ಅವಲಂಬಿತರಾಗಿದ್ದಾರೆ. ಆದ್ರೆ ಇದೀಗ ಹಳೆಯ ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತೊಂದರೆ ಉಂಟಾಗಲಿದೆ. ಅಲ್ಲದೇ ಶೇ.33%ರಷ್ಟು ಬಿತ್ತನೆ ಬೀಜ ವಿತರಣೆ ಮಾಡಬೇಕಾದ್ರೆ 5 ಕೆ.ಜಿ.ಪಾಕೇಟ್ ಗಳನ್ನ ಹೊಡೆದು ತೂಕ ಮಾಡಿಕೊಂಡಲು ಸಹ ನೀಡುವುದು ಕಷ್ಟ ಸಾಧ್ಯವಾಗಲಿದ್ದು, ಬೀಜದ ಗುಣಮಟ್ಟದ ಪ್ರಶ್ನೆ ಉದ್ಭವಿಸುವ ತೂಕದ ಗೂಳು ಶುರುವಾಗಲಿದೆ.
ವಾಯ್ಸ್ ಓವರ್.4: ಇನ್ನು ರಾಯಚೂರು ಜಿಲ್ಲೆಯಲ್ಲಿ 3,32,033 ಭೂ ಹಿಡುವಳಿದಾರರಿದ್ದರೆ, ಇದರಲ್ಲಿ 1,11,859 ಸಣ್ಣ ಮತ್ತು 1,01,422 ಅತಿ ಸಣ್ಣ ಭೂ ಹಿಡುವಳಿದಾರರಿದ್ದು, 38690 ಕ್ವಿಂಟಲ್ ಬಿತ್ತನೆ ಜಿಲ್ಲೆಗೆ ಅವಶ್ಯಕತೆಯಿದೆ. ಸರಲಾರದಿಂದ 8677 ಕ್ವಿಂಟಲ್ ಸರಬರಾಜು ಆಗಿದೆ. ಸರಕಾರ ಸ್ವಾಮ್ಯ ಸಂಸ್ಥೆಗಳಾದ ಕೆಎಸ್ಎಸ್ಸಿಯಲ್ಲಿ 4620 ಕ್ವಿಂಟಲ್, ಎನ್ಎಸ್ಸಿಯಲ್ಲಿ 7500 ಕ್ವಿಂಟಲ್ ಮತ್ತು ಖಾಸಗಿಯಲ್ಲಿ 5500 ಕ್ವಿಂಟಲ್ ದಾಸ್ತಾನಿದೆ. ರೈತರು ಸಹ ಈ ಬಾರಿ ಮುಂಗಾರು ಹಂಗಾಮ ಆಶಾಭಾವನೆಯಿಂದ ತಮ್ಮ ಹೊಲಗಳನ್ನ ಹಸನು ಮಾಡಿಕೊಂಡು ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೀಜಗಳನ್ನ ತೆಗೆದುಕೊಳ್ಳು ಆರಂಭಿಸುತ್ತಿದ್ದಾರೆ. ಆದ್ರೆ ಹಳೆಯ ನಿಯಮ ಸರಕಾರ ಪರಿಣಾಮಕಾರಿ ಜಾರಿಯಿಂದ ಸಂಕಷ್ಟ ಎದುರಾಗಿ, ಸರಕಾರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ನಿಯಮ ಸಡಿಸಲು ಒತ್ತಾಯಿಸಿದ್ದಾರೆ. ಅಧಿಕಾರಿಗಳು ನಿಯಮ ಸಡಿಲಿಕೆ ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ನಿಲ್ಲಿ, ಗಾಯದ ಮೇಲೆ ಬರೆ ಎಳೆದಂತೆ, ತೀವ್ರ ಬರಗಾಲ ಮದ್ಯ ಹಳೆಯ ನಿಯಮವನ್ನ ಕಟ್ಟುನಿಟ್ಟಾಗಿ ತರುವುದಕ್ಕೆ ಮುಂದೆ ಬಂದಿರುವುದು ಅನ್ನದಾತರು ಆಕ್ರೋಶ ವ್ಯಕ್ತಡಿಸಿದ್ರು, ನಿಯಮವನ್ನ ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದ್ದು, ಸರಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳಿಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
Conclusion:ಬೈಟ್.1: ಶ್ರೀನಿವಾಸ, ರೈತ( ಗುಲಾಬಿ ಬಣ್ಣದ ಶಾರ್ಟ್ ಧರಿಸಿದಂತ)
ಬೈಟ್.2: ಡಾ.ಆರ್.ಜಿ.ಸಂದೀಪ್, ಸಹಾಯಕ ಕೃಷಿ ಅಧಿಕಾರಿ, ರಾಯಚೂರು.(ಕುಳಿತು ಮಾತನಾಡಿದ ವ್ಯಕ್ತಿ)
ಬೈಟ್.3: ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ(ಹಸಿರು ಶಾಲು ಧರಿಸಿದ ವ್ಯಕ್ತಿ)

Last Updated : Jun 14, 2019, 9:04 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.