ETV Bharat / state

ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಕ್ರಿಕೆಟ್ ಸ್ಟಂಪ್​ನಿಂದ ಮಾರಣಾಂತಿಕ ಹಲ್ಲೆ - ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಹಲ್ಲೆ

ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೈಕ್​ ಸವಾರನ ಮೇಲೆ ಇನ್ನೋವಾ ಕಾರ್​ನಲ್ಲಿ ಬಂದ ದುಷ್ಕರ್ಮಿಗಳು ಕ್ರಿಕೆಟ್ ಸ್ಟಂಪ್​ನಿಂದ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದಾರೆ. ಲಿಂಗಸುಗೂರಲ್ಲಿ ಈ ಪ್ರಕರಣ ನಡೆದಿದೆ.

attack in road
ಕ್ರಿಕೆಟ್ ಸ್ಟಂಪ್​ನಿಂದ ಮಾರಣಾಂತಿಕ ಹಲ್ಲೆ
author img

By

Published : Apr 10, 2021, 7:41 AM IST

ರಾಯಚೂರು/ಲಿಂಗಸುಗೂರು: ಮುಖ್ಯರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿವೋರ್ವನ ಮೇಲೆ ಇನ್ನೋವಾ ವಾಹನದಲ್ಲಿ ಬರುತ್ತಿದ್ದವರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಜರುಗಿದೆ.

ಲಿಂಗಸುಗೂರು ಪಟ್ಟಣದ ಬಾಗಲವಾಡ ಕಲೆಕ್ಷನ್ ಮಾಲೀಕ ಉದಯಕುಮಾರ ಎಂಬುವರ ಮೇಲೆ ಶುಕ್ರವಾರ ಎಪಿ-21 ಎಎಲ್ 9228 ವಾಹನದಲ್ಲಿದ್ದವರು ಏಕಾಏಕಿ ಕ್ರಿಕೆಟ್ ಸ್ಟಂಪ್​ನಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ. ಪ್ರಕರಣದ ಕುರಿತು ಲಿಂಗಸುಗೂರು ಪೊಲೀಸರು ವಾಹನ ಪತ್ತೆಗೆ ಹರಸಾಹಸ ನಡೆಸಿದ್ದಾರೆ.

ಪಟ್ಟಣದಲ್ಲಿ ಈ ಮುಂಚೆ ಬಸ್ ನಿಲ್ದಾಣದ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣ ಸಹ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.