ETV Bharat / state

ರಾಯಚೂರು: ಜಮೀನುಗಳಿಗೆ ನುಗ್ಗಿದ ಕೃಷ್ಣಾ ನದಿ ನೀರು... ರೈತರು ಕಂಗಾಲು

author img

By

Published : Oct 17, 2020, 12:32 PM IST

ಡಿ. ರಾಂಪೂರು ಗ್ರಾಮದ ರೈತನೋರ್ವ ತನ್ನ 6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಉತ್ತಮ ಫಸಲು ಕೂಡ ಬಂದಿತ್ತು. ಆದ್ರೆ ಕೃಷ್ಣಾ ನದಿ ನೀರು ಜಮೀನಿಗೆ ನುಗ್ಗಿದ್ದು, ಸುಮಾರು 2 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.

crops washed away from krishna river water in raichur
ರಾಯಚೂರು ಜಮೀನುಗಳಿಗೆ ನುಗ್ಗಿದ ಕೃಷ್ಣಾ ನದಿ ನೀರು...ರೈತರು ಕಂಗಾಲು!

ರಾಯಚೂರು: ಜಿಲ್ಲೆಯ ಕೆಲ ಜಮೀನುಗಳಿಗೆ ಕೃಷ್ಣಾ ನದಿಯಿಂದ ನೀರು ನುಗ್ಗಿ, ರೈತರು ಬೆಳೆದ ಬೆಳೆಗಳು ನೀರುಪಾಲಾಗಿವೆ. ಬೆಳೆ ನಷ್ಟದಿಂದ ರೈತರು ಕಣ್ಣೀರಿಡುವಂತಾಗಿದೆ.

ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ಬೆಳೆ ನಷ್ಟ

ಕೃಷ್ಣಾ ನದಿ ತೀರದಲ್ಲಿರುವ ರಾಯಚೂರು ತಾಲೂಕಿನ ಡಿ. ರಾಂಪೂರು ಗ್ರಾಮದ ರೈತನೋರ್ವ ತನ್ನ 6 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದು, ಉತ್ತಮ ಫಸಲು ಕೂಡ ಬಂದಿತ್ತು. ಇನ್ನೇನು ಫಸಲು ಕೈ ಸೇರುವ ಸಮಯದಲ್ಲಿ ನದಿ ನೀರು ಗದ್ದೆಗೆ ನುಗ್ಗಿದೆ. ಪರಿಣಾಮ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಬೆಳೆ ನೀರುಪಾಲಾಗಿ ರೈತ ಕಂಗಾಲಾಗಿದ್ದಾನೆ. ಹಾಗಾಗಿ ಸರ್ಕಾರ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದ್ದಾನೆ.

ಕಾಡ್ಲೂರು, ಗುರ್ಜಾಪುರ‌ ಗ್ರಾಮ ಸೇರಿದಂತೆ ರಾಯಚೂರು ತಾಲೂಕಿನ 17 ಗ್ರಾಮಗಳಲ್ಲಿ ಕೆಲ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.