ETV Bharat / state

ಉಕ್ಕಿದ ಕೃಷ್ಣೆ... ಮುಳುಗಿದ ಸಾವಿರಾರು ಎಕರೆ ಬೆಳೆ... ರೈತನ ಗೋಳು ಕೇಳೋರ್ಯಾರು?

ಕೃಷ್ಣಾ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ನದಿ ದಂಡೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನೆಲಕಚ್ಚಿದೆ. ಇದರಿಂದ ಭಾರಿ ನಷ್ಟ ಉಂಟಾಗಿದ್ದು, ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

author img

By

Published : Aug 25, 2019, 4:02 AM IST

ಕೃಷ್ಣನ ಮುನಿಸು..

ರಾಯಚೂರು: ಕೃಷ್ಣಾ ನದಿಯ ಪ್ರವಾಹದಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, ಅನ್ನದಾತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಿಂದ ಸಮರ್ಪಕವಾಗಿ ಮಳೆ ಸುರಿಯದೆ ಬರಗಾಲ ಆವರಿಸಿತ್ತು. ಆದ್ರೆ ಈಗ ಜಿಲ್ಲೆಗೆ ಅಪ್ಪಳಿಸಿದ ಪ್ರವಾಹದಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ನದಿ ಪಾತ್ರದಲ್ಲಿ ನಾಟಿ ಮಾಡಿದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಭತ್ತ, ತೊಗರಿ, ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ.

ಕೃಷ್ಣನ ಮುನಿಸು..

ಜಿಲ್ಲೆಯ ಅಂದಾಜು 16,195 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ಇದರಲ್ಲಿ ದೇವದುರ್ಗ-10,293 ಹೆಕ್ಟೇರ್, ಲಿಂಗಸುಗೂರು-1,141 ಹೆಕ್ಟೇರ್, ರಾಯಚೂರು-3,344 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತುಂಗಭದ್ರಾ ನದಿ ಪ್ರವಾಹದಿಂದ ಮಾನವಿ-1,289 ಹೆಕ್ಟೇರ್, ಸಿಂಧನೂರು-128 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Intro:ಸ್ಲಗ್: ಪ್ರವಾಹ ಎಫೆಕ್ಟ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 24-೦8-2019
ಸ್ಥಳ: ರಾಯಚೂರು
ಆಂಕರ್: ಮಹಾರಾಷ್ಟ್ರದ ಮಹಾ ಮಳೆಯಿಂದ ಕೃಷ್ಣ ನದಿಯಲ್ಲಿ ನೀರು ಉಕ್ಕಿರ ಹರಿದು ನದಿ ಪಾತ್ರದ ಹೊಲಗಳಿಗೆ ಬೆಳೆಯನ್ನ ನಷ್ಟ ಉಂಟು ಮಾಡಿದೆ. ರಾಯಚೂರು ಜಿಲ್ಲೆಯ ಕೃಷ್ಣ ನದಿಯ ಪ್ರವಾಹಕ್ಕೆ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದಂತಹ ಬೆಳೆ ಹಾನಿ ಸಂಭವಿಸಿ ಅನ್ನದಾತರು ಪರಾದಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ಜಿಲ್ಲೆಯ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಮಳೆ ಸುರಿಯದೆ ಜಿಲ್ಲೆಯ ಬರಗಾಲ ಆವರಿಸಿದೆ. ಈ ಬರದ ಛಾಯೆ ಹೊರಬಂದು, ಪ್ರಸಕ್ತ ಸಾಲಿನಲ್ಲಿ ಬರದಿಂದ ಚೇತರಿಸಿಕೊಳ್ಳುತ್ತೇವೆ ಎನ್ನುವ ಆಶಭಾವನೆ ರೈತರಲ್ಲಿ ಮನೆ ಮಾಡಿತ್ತು. ಆದ್ರೆ ಜಿಲ್ಲೆಗೆ ಅಪ್ಪಳಿಸಿದ ಪ್ರವಾಹದಿಂದ ಮತ್ತೊಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ವಾಯ್ಸ್ ಓವರ್.2: ಜಿಲ್ಲೆಯ ಕೃಷ್ಣ ನದಿ ವಿಶಾಲವಾಗಿ ಹರಿಯುತ್ತಿರುವದರಿಂದ ಜಿಲ್ಲೆಯ ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕಿನಲ್ಲಿ ನದಿ ಪಾತ್ರದಲ್ಲಿ ನಾಟಿ ಮಾಡಿದಂತಹ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿನ ಭತ್ತ, ತೊಗರಿ, ತೋಟಗಾರಿಕೆ ಬೆಳೆಗಳು ನೀರು ಪಾಲು ಆಗಿದೆ. ರಾಯಚೂರು ಜಿಲ್ಲೆಯ ಸರಿಸುಮಾರು 16195 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ ದೇವದುರ್ಗ-10293 ಹೆಕ್ಟರ್, ಲಿಂಗಸೂಗೂರು, 1141 ಹೆಕ್ಟರ್, ರಾಯಚೂರು-3344 ಹೆಕ್ಟರ್ ಪ್ರದೇಶದಲ್ಲಿ ಕೃಷ್ಣ ನದಿಯಿಂದ ಬೆಳೆ ಹಾನಿಯಾಗಿದ್ದಾರೆ, ತುಂಗಭದ್ರಾ ನದಿ ಪ್ರವಾಹದಿಂದ ಮಾನವಿ-1289 ಹೆಕ್ಟರ್, ಸಿಂಧನೂರು-128 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಇತ್ತೀಚೆಗೆ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಲಾಗಿದ್ದು, ಇನ್ನು ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ವಾಯ್ಸ್ ಓವರ್.3: ಇನ್ನು ಹಾನಿ ಉಂಟಾದ 16195 ಹೆಕ್ಟರ್ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳು ಹಾನಿಯಾಗಿದೆ. ಹಾನಿಯಾದ ಬೆಳೆಗಳ ಪೈಕಿ ಬಹುತೇಕ ಭತ್ತದ ಗದ್ದೆಗಳಿಗೆ ನೀರು ನುಗ್ಗಿ, ಬೆಳೆ ಎಲ್ಲಾವೂ ನೀರು ಪಾಲು ಆಗಿ, ರೈತರ ಭತ್ತದ ಬೆಳೆ ನಾಶವಾಗಿದೆ. ಬೆಳೆ ನಷ್ಟ ಹೊಂದಿದ್ದ ರೈತನಿಗೆ ಸರಕಾರ ಪರಿಹಾರ ನೀಡುತ್ತದೆ. ಸರಕಾರ ನಿಯಮಗಳ ಪ್ರಕಾರ ನೀಡುವ ಪರಿಹಾರ ಧನ ರೈತರು ಖರ್ಚು ಮಾಡಿದ ಸಮವಾಗಿ ಇರುವುದಿಲ್ಲ. ಹೀಗಾಗಿ ಸರಕಾರ ಪರಿಹಾರವನ್ನ ಹೆಚ್ಚಳ ಮಾಡಬೇಕು ಎನ್ನುತ್ತಾರೆ ರೈತ ಮುಖಂಡರು. ಒಟ್ನಿಲ್ಲಿ, ಬರದಿಂದ ಬಾಳಲಿ ಬೆಡಾಗಿದ್ದ ರಾಯಚೂರು ಜಿಲ್ಲೆಯ ಅನ್ನದಾತರು ನೆರೆ ಹಾವಳಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿರುವುದು ಸುಳ್ಳಲ್ಲ.

Conclusion:ಬೈಟ್.1: ಚಾಮರಸ ಮಾಲೀಪಾಟೀಲ್, ರೈತ ಸಂಘದ ಮುಖಂಡ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.