ಲಿಂಗಸುಗೂರು : ಕೋವಿಡ್ ನಿಯಂತ್ರಿಸುವ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅನೇಕ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆದೇಶಿಸಿವೆ. ಆದರೆ, ಗ್ರಾಮ ಪಂಚಾಯತ್ 2ನೇ ಹಂತದ ಸಾರ್ವತ್ರಿಕ ಚುನಾವಣೆ ಮಸ್ಟರಿಂಗ್ ಆವರಣದಲ್ಲಿ ಬಹುತೇಕರು ಮಾರ್ಗಸೂಚಿಗಳನ್ನು ಪಾಲಿಸಿಲ್ಲ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಅನುಷ್ಠಾನಾಧಿಕಾರಿಗಳ ಸಮಕ್ಷಮವೆ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ ನಿಯಮ ಪಾಲಿಸದೆ ಗುಂಪು ಗುಂಪಾಗಿ ನೆರೆದಿದ್ದರು. ಗರ್ಭಿಣಿಯರು, ಬಾಣಂತಿಯರು, ಸಣ್ಣ ಮಕ್ಕಳ ತಾಯಂದಿರು, ಅನಾರೋಗ್ಯ ಪೀಡಿತರು ಗುಂಪು ಗುಂಪಾಗಿ ನೆರೆದಿದ್ದರು.
2ನೇ ಹಂತದ ಮತದಾನ ಡಿ. 27ರಂದು ನಡೆಯಲಿದ್ದು, ಇಂದು ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳ ವಿತರಣೆ ನಡೆಯಿತು.