ETV Bharat / state

ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಆರೋಪ: ಕಲ್ಲು ತೂರಿ ಪೋಷಕರ ಆಕ್ರೋಶ - ಗಣೇಶ ವಿಸರ್ಜನೆ

ಪೊಲೀಸರು ನಡೆಸಿದ ಹಲ್ಲೆಯಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಪೋಷಕರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಮೃತನ ಪೋಷಕರು ಹಾಗೂ ಗ್ರಾಮಸ್ಥರು
author img

By

Published : Sep 15, 2019, 8:55 PM IST

Updated : Sep 15, 2019, 9:39 PM IST

ರಾಯಚೂರು: ಪೊಲೀಸರು ನಡೆಸಿದ ಹಲ್ಲೆಯಿಂದ ತಮ್ಮ ಮಗ ಮೃತಪಟ್ಟಿದ್ದಾನೆಂದು ಆರೋಪಿಸಿ ಮೃತನ ಪೋಷಕರು ಹಾಗೂ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರಹಾಕಿರುವ ಮೃತನ ಪೋಷಕರು ಹಾಗೂ ಗ್ರಾಮಸ್ಥರು

ಶಿವು ಅಬಕಾರಿ ಎಂಬಾತ ಮೃತ ವ್ಯಕ್ತಿ. ಇತ್ತೀಚೆಗೆ ಗಬ್ಬೂರು ಗ್ರಾಮದಲ್ಲಿ ನಡೆದ ಗಣೇಶ ನಿಮಜ್ಜನದ ವೇಳೆ ಶಿವುನ ಬೈಕ್‌‌ನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು. ಆದರೆ ಆ ಬೈಕನ್ನು ಪುನಃ​ ತರಲೆಂದು ಠಾಣೆಗೆ ಹೋದಾಗ ಅಲ್ಲಿ ಪಿಎಸ್​ಐ ಹಾಗೂ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಆತನ ಪೋಷಕರು ಹಾಗೂ ಗ್ರಾಮಸ್ಥರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ರಾಜ್ಯ ಹೆದ್ದಾರಿ ಮೇಲೆ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ‌ನಿರ್ಮಾಣಗೊಂಡಿದೆ.

Intro:ಸ್ಲಗ್: ಪ್ರತಿಭಟನೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ಪೊಲೀಸರ್ ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆಂದು ಆರೋಪಿಸಿ ಪೊಷಕರು ಹಾಗೂ ಗ್ರಾಮಸ್ಥರು ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮಸ್ಥರು ಸಿಪಿಐ ವಾಹನಕ್ಕೆ ಕಲ್ಲು ತೂರಾಟ ನಡೆಸಿ, ರಾಜ್ಯ ಹೆದ್ದಾರಿ ಮೇಲೆ ಟೈರ್ ಗೆ ಬೆಂಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವು ಅಬಕಾರಿ ಯುವಕ ಮೃತಪಟ್ಟಿರುವ ಯುವಕನಾಗಿದ್ದಾನೆ. ಗಬ್ಬೂರು ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ  ಶಿವು ಎನ್ನುವ ಬೈಕ್‌‌ನ್ನು ಪೊಲೀಸ್ ರು ತೆಗೆದುಕೊಂಡು ಹೋಗಿದ್ದರು. ಬೈಕ್‌ ತೆಗೆದುಕೊಂಡು ಹೋಗಿದ್ದಾಗ ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡಿದ್ದರಿಂದ ಯುವಕ ಸಾವನ್ನಪ್ಪಿದ್ದಾನೆಂದು ಗ್ರಾಮಸ್ಥರು, ಪೊಷಕರು ದೂರಿದ್ರು. ಪಿಎಸ್‌ಐ ಹಿಗ್ಗಾಮುಗ್ಗ ಥಳಿಸಿದ ಯುವಕ ಮೃತಪಟ್ಟಿದ್ದರೆ ಆಕ್ರೋಶಗೊಂಡ ಗ್ರಾಮಸ್ಥರು, ಪೊಷಕರು ಠಾಣೆಯ ಮುಂದಿನ ರಾಜ್ಯದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ಪೊಲೀಸ್ ವಾಹನಕ್ಕೆ ಜಖಂಗೊಳಿಸಿ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. Conclusion:ಸದ್ಯ ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ‌ನಿರ್ಮಾಣಗೊಂಡಿದೆ. ಘಟನೆಯ ಕುರಿತು ರಾಯಚೂರು ಎಸ್ಪಿ ದೂರವಾಣಿ ಸಂಪರ್ಕಿಸಿದಾಗ ಕರೆ ತೆಗದುಕೊಂಡಿಲ್ಲ.
Last Updated : Sep 15, 2019, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.