ರಾಯಚೂರು: ಕಬ್ಬಿಣದ ಸರಳುಗಳನ್ನು ಹೊತ್ಯೊಯುತ್ತಿದ್ದ ಲಾರಿಯ ಹಿಂಬದಿ ಗಾಲಿಗೆ ಸಿಲುಕಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಮಾನವಿ ಪಟ್ಟಣದಲ್ಲಿ ನಡೆದಿದೆ.
ಮಾನವಿ ಪಟ್ಟಣದ ಚಿತ್ರಮಂದಿರ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಂಬರೀಶ್ ರಾಜಲದಿನ್ನಿ(38) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಮಾನವಿ ಪಟ್ಟಣದಿಂದ ಸಿಂಧನೂರಿಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು, ಲಾರಿ ಹಿಂದಿಕ್ಕಲು ಹೋಗಿ ಎದುರಿಗೆ ಬಂದ ಬೈಕ್ಗೆ ಡಿಕ್ಕಿ ಹೊಡೆದ ಬೈಕ್ ಸವಾರ ಲಾರಿ ಹಿಂಬದಿ ಗಾಲಿಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮಾನವಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.