ETV Bharat / state

ಬಸವನಗೌಡ ತುರವಿಹಾಳಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ: ಈ ಬಗ್ಗೆ ಅವರು ಹೇಳಿದ್ದೇನು?

author img

By

Published : Oct 10, 2019, 9:37 PM IST

ಪಕ್ಷದೊಳಗಿನ ಅಸಮಾಧಾನದ ಹೊಗೆಯನ್ನು ಶಮನ ಮಾಡಲು ಬಿಜೆಪಿಯು ನಿಗಮ-ಮಂಡಳಿ ಸ್ಥಾನಗಳಿಗೆ ಅತೃಪ್ತರನ್ನು ನೇಮಿಸಿ ಆದೇಶ ಹೊರಡಿಸಿದೆ.

Basavanagowda Thuravihale

ರಾಯಚೂರು: ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಬಿಜೆಪಿಯಲ್ಲಿ ಬಂಡಾಯ ಏಳುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪಕ್ಷದಲ್ಲಿರುವ ಅತೃಪ್ತರನ್ನು ಓಲೈಸುವ ಪ್ರಯತ್ನಕ್ಕೆ ಮುಂದಾಗಿದ್ದು, ಅದಕ್ಕಾಗಿ ನಿಗಮ-ಮಂಡಳಿ ಸ್ಥಾನಗಳನ್ನು ದಾಳವಾಗಿ ಬಳಸಿಕೊಂಡಿದೆ.

ಅದರಂತೆ ಕಳೆದ ಬಾರಿ ಚುನಾವಣೆಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವನಗೌಡ ತುರುವಿಹಾಳ ಅವರಿಗೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿದೆ. ಸರ್ಕಾರ ರಚಿಸಲು ಬೆನ್ನೆಲುಬಾಗಿದ್ದ ಅನರ್ಹ ಶಾಸಕ ಪ್ರತಾಪ್​ ಗೌಡ ಪಾಟೀಲ್​ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಮಗೆ ಟಿಕೆಟ್​ ನೀಡಬೇಕು ಎಂದು ಬಸವನಗೌಡ ಒತ್ತಾಯಿಸಿದ್ರು.

ಇದು ಪ್ರತಾಪ್​ ಗೌಡ ಪಾಟೀಲ್‌ಗೆ​ ತಲೆ ಬಿಸಿ ತಂದಿತ್ತು. ಬಂಡಾಯ ಶಮನ ಮಾಡಲು ಬಸವನಗೌಡ ಅವರಿಗೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ (ಕಾಡಾ) ತುಂಗಭದ್ರಾ ಯೋಜನೆ ಅಧ್ಯಕ್ಷರನ್ನಾಗಿ ನೇಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಪ್ರತಾಪ್​ ಗೌಡ ಪಾಟೀಲ್ ವಿರುದ್ಧ ಕೇವಲ 213 ಮತಗಳ ಅಂತರದಲ್ಲಿ ಬಸವನಗೌಡ ಪರಾಭವಗೊಂಡಿದ್ದರು.

ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿರುವ ಕುರಿತು 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಸವನಗೌಡ ತುರವಿಹಾಳ, ಸರ್ಕಾರ ನೀಡಿರುವ ಕಾಡಾ ಸ್ಥಾನದ ವಿಚಾರವಾಗಿ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಕಾರ್ಯಕರ್ತರು, ಮುಖಂಡರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ತೀರ್ಪು ಬಂದ ಬಳಿಕ ಚರ್ಚಿಸಬೇಕೆಂದುಕೊಂಡಿದ್ದೆ. ಅಷ್ಟರಲ್ಲಾಗಲೇ ನೇಮಕ ಆದೇಶ ಮಾಡಿದ್ದಾರೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಚುನಾವಣಾ ದಿನಾಂಕ ಘೋಷಿಸಿದ್ದಾರೆ. ನಾನು ಹೂಡಿರುವ ದಾವೆಯಿಂದಾಗಿ ಈ ಕ್ಷೇತ್ರಕ್ಕೆ ಚುನಾವಣೆ ತಡೆ ಹಿಡಿದಿದ್ದಾರೆ. ಕೇಸ್​ ವಾಪಸ್​ ಪಡೆಯುವುದೇ ಬೇಡವೇ? ಎಂಬುದನ್ನು ಮುಖಂಡರೊಂದಿಗೆ ಚರ್ಚಿಸಿಯೇ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು. ಪರಾಜಿತ ಅಭ್ಯರ್ಥಿಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಸ್ಥಾನವನ್ನು ಬಸವನಗೌಡ ಅವರು ಒಪ್ಪುತ್ತಾರೋ ಅಥವಾ ಇಲ್ಲವೋ ಎನ್ನುವುದು ಸದ್ಯ ಕುತೂಹಲ ಕೆರಳಿಸಿದೆ.

Intro:¬ಸ್ಲಗ್: ಬಿಜೆಪಿ ಪರಾಭವಗೊಂಡ ಅಭ್ಯರ್ಥಿಗೆ ಒಲಿತು ಸಚಿವ ಸಂಪುಟ ದರ್ಜೆ ಸ್ಥಾನಮಾನ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 10-1೦-2019
ಸ್ಥಳ: ರಾಯಚೂರು
ಆಂಕರ್: ಬಿಜೆಪಿ ಸರಕಾರ ಹಾಲಿ ಶಾಸಕರಾಗಿ ಒಲಿಯಾದ ಸಚಿವ ಸ್ಥಾನೆ, ಪರಾಜಿತ ಮಾಜಿ ಶಾಸಕರಿಗೆ ಮಂತ್ರಿಗಿರಿ ಜತೆ ಉಪಮುಖ್ಯಮಂತ್ರಿ ಸ್ಥಾನ ಒಲಿದು ಬಂದಿತ್ತು. ಇದೀಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಮತಗಳಿಂದ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿಗೆ ಸಚಿವ ಸಂಪುಟ ದರ್ಜೆಯ ಸ್ಥಾನವನ್ನ ಕಲ್ಪಿಸಲಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ರಾಯಚೂರು ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಸ್ಕಿ ಕ್ಷೇತ್ರಕ್ಕೆ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಬಸವನಗೌಡ ತುರುವಿಹಾಳ ಕೇವಲ 213 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಪ್ರತಾಪ್ ಗೌಡ ಪಾಟೀಲ್ ವಿರುದ್ದ ಸೋಲು ಅನುಭವಿಸಿದ್ರು. ಸೋಲಿಗೆ ಅಕ್ರಮ ಮತದಾನ ಕಾರಣವೆಂದು ನ್ಯಾಯಲಯದ ಮೋರೆ ಹೋಗಿದ್ದು, ಪ್ರಕರಣ ಇನ್ನೂ ನ್ಯಾಯಲಯದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ನಡೆಯಬೇಕಾದ 17 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪೈಕಿ ಮಸ್ಕಿ ಕ್ಷೇತ್ರ ಹೊರತು ಪಡಿಸಿ 15 ಕ್ಷೇತ್ರಗಳನ್ನು ದಿನಾಂಕವನ್ನ ಚುನಾವಣೆ ಆಯೋಗ ಘೋಷಣೆ ಮಾಡಿದೆ.
ವಾಯ್ಸ್ ಓವರ್.2: ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್ ದಿನಾಂಕ ಘೋಷಣೆಯಾಗದಿರುವುದು ಅನರ್ಹಗೊಂಡ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಿಜೆಪಿಗೆ ತಲೆ ನೋವು ಆಗಿತ್ತು. ಆದ್ರೆ ತಲೆ ನೋವಿಗೆ ಮಲಾಮು ಎಂಬಂತೆ, ನ್ಯಾಯಲಯದಲ್ಲಿ ಧಾವೆ ಹಾಕಿರುವ ಬಿಜೆಪಿ ಪರಾಜಿತ ಅಭ್ಯರ್ಥಿ ಬಸವನಗೌಡ ತುರವಿಹಾಳಿಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ(ಕಾಡಾ) ತುಂಗಭದ್ರಾ ಯೋಜನೆ ಮುನಿರಾಬಾದ್ ಅಧ್ಯಕ್ಷರಾನ್ನಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶವನ್ನ ಮಾಡುವ ಮೂಲಕ ಅನರ್ಹ ಶಾಸಕ ಪ್ರತಾಪ್ ಗೌಡರಿಗೆ ತಲೆ ನೋವು ತಣಿಸುವ ಮಾಡಿದ್ದಾರೆ.
ವಾಯ್ಸ್ ಓವರ್.3: ಆದ್ರೆ ಈ ಬಗ್ಗೆ ಈಟಿವಿ ಭಾರತ್ ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬಸವನಗೌಡ ತುರವಿಹಾಳ, ಸರಕಾರ ನೀಡಿರುವ ಕಾಡಾ ಸ್ಥಾನದ ವಿಚಾರವಾಗಿ ತಮ್ಮ ಬೆಂಬಲಿಗರು, ಮುಖಂಡರೊಂದಿಗೆ ಚರ್ಚೆ ಮಾಡುತ್ತೇನೆ. ಕಾಡಾ ಅಧ್ಯಕ್ಷ ನೀಡಿರುವುದಕ್ಕೆ ಇದ್ದರು ಸಹಮತ, ಇಲ್ಲದಿದ್ದರು ಸಹಮತವಿದೆ. ಆದ್ರೆ ಅಂತಿಮ ತಿರ್ಮಾನ ಬೆಂಬಲಿಗರು, ಮುಖಂಡರೊಂದಿಗೆ ನಿರ್ಣಯಸಲಾಗುವುದು. ಬರುವಂತಹ ಉಪಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಸ್ಪರ್ಧೆ ಮಾಡುವ ಅಭಿಲಾಷ ಹೊಂದಿದ್ದರೆ, ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಹಾಗೂ ಕಾರ್ಯಕರ್ತರ ಮುಖಂಡ ಉಪಚುನಾವಣೆ ಸ್ಪರ್ಧೆ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅನರ್ಹ ಶಾಸಕರ ಪ್ರಕರಣ ಇನ್ನೂ ನ್ಯಾಯಲಯದಲ್ಲಿ ಇರುವ ಕಾರಣ, ನ್ಯಾಯಲಯದಿಂದ ಯಾವ ತೀರ್ಪು ಬಂದ್ಮೇಲೆ ಚರ್ಚೆ ಮಾಡಬೇಕು ವಿಚಾರವಿತ್ತು. ಇದರ ನಡುವೆ ನೇಮಕ ಆದೇಶ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ. ನ್ಯಾಯಲಯದಲ್ಲಿ ಧಾವೆ ಹಾಕಿದ್ದಾರೆ ಅದನ್ನು ಹಿಂಪಡೆಯುತ್ತಿರಾ ಎನ್ನುವ ಪ್ರಶ್ನೆಗೆ, ಅದನ್ನು ಹಿಂಪಡೆಯಲು ಬರುವುದಿಲ್ಲ. ಕೇಸ್ ನ್ನು ವಾಪಾಸ್ ತೆಗೆದುಕೊಳ್ಳುವಂತೆ ಯಾರಾದರೂ ಮನವೊಲಿಸಿದ್ದಾರೆ ಅದು ಯಾವುದೇ ಮಾತುಕತೆಯಿಲ್ಲ. ಅಕ್ರಮ ಮತದಾನ ಕುರಿತಂತೆ ನ್ಯಾಯಲಯದಿಂದ ತೀರ್ಪುದಾರೂ ಹೊರಬರಬೇಕು ಇಲ್ಲವೇ ನೀವು ಕೇಸ್ ವಾಪಸ್ ತೆಗೆದುಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದು ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ತಿರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಅಧ್ಯಕ್ಷ ಸ್ಥಾನವನ್ನ ಒಲಿದು ಬಂದಿದ್ದು, ಸ್ಪಷ್ಟವಾದ ಅಭಿಪ್ರಾಯ ತಿಳಿಸದೆ ಇರುವುದು ಒಪ್ಪುತ್ತಾರೆ ಅಥವಾ ಇಲ್ಲವೊ ಎನ್ನುವ ಗೊಂದಲ ಮೂಡಿಸಿದೆ.Conclusion:
ವಾಯ್ಸ್ ಓವರ್.4: ಒಟ್ನಿಲ್ಲಿ, ಮಸ್ಕಿ ಕ್ಷೇತ್ರದ ಉಪಚುನಾವಣೆ ಕಳೆದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಭವಗೊಂಡ ಅಭ್ಯರ್ಥಿ ಬಸವನಗೌಡ ತುರವಿಹಾಳ ಹಾಕಿರುವ ಅಕ್ರಮ ಮತದಾನ ಕೇಸ್ ಹಿನ್ನಲೆಯಿಂದಾಗಿ ಬೈ ಎಲೆಕ್ಷನ್ ತಡೆಯಿದ್ದು, ಪರಾಜಿತ ಅಭ್ಯರ್ಥಿಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಅಧ್ಯಕ್ಷವನ್ನ ಬಸವನಗೌಡ ಒಪ್ಪುತ್ತಾರೋ ಅಥವಾ ಇಲ್ಲವೋ ಎನ್ನುವುದು ಸದ್ಯ ಕುತೂಹಾಲ ಕೆರಳಿಸಿದೆ.
ಬೈಟ್.1: ಬಸವನಗೌಡ ತುರವಿಹಾಳ, ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ(ದೂರವಾಣಿ ಸಂಭಾಷಣೆಯಿದೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.