ರಾಯಚೂರು: ಕೊರೊನಾ ವೈರಸ್ ತಡೆ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಹಾಕಿಸುವಲ್ಲಿ ಅಸಹಕಾರ ತೋರಿದ ಗ್ರಾ ಪಂ ಸದಸ್ಯರಿಬ್ಬರಿಗೆ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೋಟಿಸ್ ಜಾರಿಗೊಳಿಸಿದ್ದಾರೆ.
ತಾಲೂಕಿನ ಗಿಲ್ಲೆಸೂಗೂರು ಗ್ರಾ ಪಂ ಸದಸ್ಯರಾದ ಮಲ್ಲೇಶ ಹಾಗೂ ರಂಗಪ್ಪಗೆ ನೋಟೀಸ್ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹತೋಟಿಗೆ ಸದಸ್ಯರನ್ನು ಒಳಗೊಂಡಂತೆ ಗ್ರಾ.ಪಂ. ಮಟ್ಟದ ಕಾರ್ಯಪಡೆ ರಚಿಸಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಹಾಗೂ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ದುಗನೂರು ಗ್ರಾಮದಲ್ಲಿ ಗುರುವಾರ ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದವರ ಮನೆಗಳಿಗೆ ತೆರಳಿ, ಅವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿ ವ್ಯವಸ್ಥೆ ಮಾಡಲಾಗಿತ್ತು.
ಆದರೆ, ಕಾರ್ಯಪಡೆಯಲ್ಲಿದ್ದ ತಾವು ಸಹಕಾರ ನೀಡುವಲ್ಲಿ ನಿಷ್ಕಾಳಜಿ ತೋರಿದ್ದರಿಂದ ನಿಮ್ಮ ಸದಸ್ಯತ್ವ ರದ್ದತಿಗೆ ಏಕೆ ಕ್ರಮ ಕೈಗೊಳ್ಳಬಾರದು ನೋಟಿಸ್ ಜಾರಿ ಮೂರು ದಿನದೊಳಗೆ ಈ ಸಮಜಾಯಿಷಿ ಸೂಚಿಸಲಾಗಿದೆ.
ಓದಿ: ಕೊರೊನಾ 3ನೇ ಅಲೆ ತಡೆಯಲು ಬಿಬಿಎಂಪಿ ರೆಡಿ: 54 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು