ರಾಯಚೂರು: ನಗರದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಯಂತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸಿ ಮೇಳದ ಪ್ರಯೋಜನ ಪಡೆದರು.
ಇಲ್ಲಿ ಕಳೆ ಕೊಚ್ಚುವ ಯಂತ್ರ, ರೊಟರಿ ಟಿಲ್ಲರ್ಗಳು , ಸ್ಪ್ರೇಯರ್ಗಳು, ಮರ ಕೊಯ್ಯುವ ಯಂತ್ರಗಳು, ಔಷಧಿ ಸಿಂಪಡಣೆ ಮಾಡುವ ವಿವಿಧ ಕೃಷಿ ಉಪಕರಣಗಳು, ಯಂತ್ರಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಕೃಷಿಯನ್ನು ಪರಿಣಾಮಕಾರಿಯಾಗಿ ಲಾಭದಾಯಕವಾಗಿಸಲು ಹಾಗೂ ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸಲು ಯಂತ್ರಗಳು ಸಹಾಯಕವಾಗಿವೆ.
ರೈತರಿಗೆ ಕಡಿಮೆ ಬೆಲೆ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡುವುದು ಈ ಕೃಷಿ ಮೇಳದ ಮುಖ್ಯ ಉದ್ದೇಶವಾಗಿದೆ.