ರಾಯಚೂರು: ಜಿಲ್ಲೆಯ ಮಸ್ಕಿಯ ಹಾಲಾಪುರ ಗ್ರಾಮದ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಮತದಾರರ ಚೀಟಿ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮತಗಟ್ಟೆಗೆ ಆಮಿಗಮಿಸುತ್ತಿದ್ದ ಮತದಾರರಿಗೆ ಕಾಂಗ್ರೆಸ್ ಚಿಹ್ನೆ ಇರುವ ಮತದಾರರ ಚೀಟಿ ಹಂಚಲಾಗುತ್ತಿದೆ ಎಂದು ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಮತಗಟ್ಟೆ ಬಳಿ ಜನಜಂಗುಳಿ ಕಂಡು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗರಂ ಆಗಿದ್ದು, ಪೊಲೀಸರು ಗುಂಪುಗೂಡಿದವರನ್ನು ಚದುರಿಸಿದರು.
ಓದಿ: ಚುನಾವಣೆ ಪಕ್ಕಕ್ಕಿಟ್ಟು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದ ಗೋಕಾಕ್ ಜನತೆ