ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ನಾಪತ್ತೆಯಾದವರಲ್ಲಿ ನಾಲ್ವರಲ್ಲಿ ಇಬ್ಬರು ಮಹಿಳೆಯರ ಮೃತದೇಹ ಜುರಲಾ ಡ್ಯಾಂ ಬಳಿ ಪತ್ತೆಯಾಗಿದೆ.
ತಾಲೂಕಿನ ಕುರ್ವಕಲಾ ನಡುಗಡ್ಡೆ ಪ್ರದೇಶದ ನಿವಾಸಿ ಸುಮಲತಾ ಹಾಗೂ ನರಸಮ್ಮ ಎಂಬುವರ ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ಯಾಪಲದಿನ್ನಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತೆಲಂಗಾಣದ ಮಕ್ತಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಚಾಪಾಡುಯಿಂದ ತೆಪ್ಪದ ಮೂಲಕ 13 ಮಂದಿ ತೆರಳುತ್ತಿದ್ದರು. ಈ ವೇಳೆ ತೆಪ್ಪ ನೀರಿನ ರಭಸಕ್ಕೆ ಸಿಲುಕಿ ಮುಳುಗಿತ್ತು.
ತೆಲಂಗಾಣದಲ್ಲಿ ಮುಳುಗಿದ ತೆಪ್ಪ... ತಾಯಿ-ಮಗಳು ಸೇರಿ ರಾಜ್ಯದ ನಾಲ್ವರು ನಾಪತ್ತೆ!
ಈ ವೇಳೆ 9 ಜನ ಈಜಿ ದಡ ಸೇರಿದರೆ, ತಾಯಿ, ಮಗಳು ಸೇರಿದಂತೆ ನಾಲ್ವರು ನದಿಯಲ್ಲಿ ನಾಪತ್ತೆಯಾಗಿದ್ದರು. ನಾಪತ್ತೆಯಾದವರ ಶೋಧಕ್ಕಾಗಿ ತೆಲಂಗಾಣ-ಕರ್ನಾಟಕ ರಾಜ್ಯದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ.