ರಾಯಚೂರು: ಇಂದು 131 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 1701ಕ್ಕೆ ತಲುಪಿದೆ.
ಇಂದು ರಾಯಚೂರು ತಾಲೂಕಿನಲ್ಲಿ 81, ಮಾನವಿಯಲ್ಲಿ 8, ದೇವದುರ್ಗದಲ್ಲಿ 7, ಲಿಂಗಸುಗೂರಿನಲ್ಲಿ 23, ಸಿಂಧನೂರಿನಲ್ಲಿ 12 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ ಒಟ್ಟು 863 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 820 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇದರಲ್ಲಿ 86 ಸೋಂಕಿತರಿಗೆ ಒಪೆಕ್ ಆಸ್ಪತ್ರೆಯಲ್ಲಿ ಹಾಗೂ 734 ಮಂದಿಗೆ ಕೋವಿಡ್ ಕೇರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಪತ್ತೆಯಾಗಿರುವ ಸೋಂಕಿತರ ಪ್ರಾಥಮಿಕ, ದ್ವೀತಿಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.