ಮೈಸೂರು: ಹುಲ್ಲು ಕಟಾವು ವೇಳೆ ಹಾವು ಕಚ್ಚಿ ಯುವಕ ಮೃತಪಟ್ಟಿರುವ ಘಟನೆ ಕೆ.ಆರ್.ನಗರ ತಾಲೂಕಿನ ಕರ್ತಾಳು ಗ್ರಾಮದಲ್ಲಿ ನಡೆದಿದೆ.
ಕೆ.ಜೆ.ಸಚಿನ್ (19) ವರ್ಷ ಮೃತಪಟ್ಟ ಯುವಕ. ವಿಷಕಾರಿ ಹಾವೊಂದು ಕಚ್ಚಿದ್ದು, ಈ ವೇಳೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಯುವಕನನ್ನು ತಕ್ಷಣ ಕೇರಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಈ ಸಂಬಂಧ ಕೆ.ಆರ್.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.