ETV Bharat / state

Mysuru crime: 'ಮಗಳನ್ನು ಮದುವೆ ಮಾಡಿಕೊಡದ್ದಕ್ಕೆ 850 ಅಡಿಕೆ ಗಿಡ ಕಡಿದು ಹಾಕಿದ ಯುವಕ'- ಪೊಲೀಸರಿಗೆ ದೂರು ನೀಡಿದ ವ್ಯಕ್ತಿ - 850 ಅಡಿಕೆ ಗಿಡಿಗಳು

Arecanut trees: ಮಗಳನ್ನು ಮದುವೆ ಮಾಡಿಕೊಡದ ಕಾರಣಕ್ಕೆ ಯುವಕ ನೂರಾರು ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾನೆ ಎಂದು ಯುವತಿಯ ತಂದೆ ಆರೋಪ ಮಾಡಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

cut down 850 Arecanut tree
ಮಗಳನ್ನು ಮದುವೆ ಮಾಡಿಕೊಡದ ಕಾರಣಕ್ಕೆ 850 ಅಡಿಕೆ ಗಿಡಗಳನ್ನು ಕಡಿದ ಯುವಕ: ಪುತ್ರಿಯ ತಂದೆ ಆರೋಪ..
author img

By

Published : Aug 10, 2023, 3:58 PM IST

Updated : Aug 10, 2023, 4:53 PM IST

ನೊಂದ ರೈತ ಕೆ.ವೆಂಕಟೇಶ್ ಮಾತನಾಡಿದರು.

ಮೈಸೂರು: ಮಗಳನ್ನು ಮದುವೆ ಮಾಡಿಕೊಡಲು ಒಪ್ಪದ ತಂದೆಯ ನಿರ್ಧಾರದಿಂದ ಕೋಪಗೊಂಡ ಯುವಕನೊಬ್ಬ, ಯುವತಿಯ ತಂದೆಗೆ ಸೇರಿದ ಫಸಲಿಗೆ ಬಂದಿದ್ದ 850ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕತ್ತರಿಸಿ ಹಾಕಿರುವ ಆರೋಪ ಪ್ರಕರಣ ಹುಣಸೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಈ ಸಂಬಂಧ ಯುವತಿಯ ತಂದೆ ಆರೋಪಿಯ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ.

ಕಡೆಮನುಗನಹಳ್ಳಿ ಗ್ರಾಮದ ಕೃಷ್ಣೆಗೌಡರ ಪುತ್ರ, ಕೆ.ವೆಂಕಟೇಶ್ ಅವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟದಲ್ಲಿನ ಗಿಡಗಳನ್ನು ಕಡಿದು ಹಾಕಲಾಗಿದೆ. ವೆಂಕಟೇಶ್ ಬೆಳಿಗ್ಗೆದ್ದು ತೋಟದ ಪರಿಸ್ಥಿತಿ ನೋಡಿ ಗೋಳಾಡುತ್ತಿದ್ದಾರೆ. ಪಕ್ಕದ ಜಮೀನಿನ ರೈತರು ಬಂದು ಸಮಾಧಾನಪಡಿಸಿದ್ದಾರೆ‌.

ರೈತ ವೆಂಕಟೇಶ್ ಪ್ರತಿಕ್ರಿಯೆ: ''ಎರಡ್ಮೂರು ದಿನಗಳ ಹಿಂದೆ ಅರ್ಧ ಎಕರೆ ಶುಂಠಿ ಕಳ್ಳತನವಾಗಿತ್ತು. ಆಗ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಪೊಲೀಸರು ಬಂದು ಸ್ಥಳ ಮಹಜರು ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ, ಆರೋಪಿಗಳನ್ನು ಸೆರೆ ಹಿಡಿದಿಲ್ಲ. ಪೊಲೀಸರು ಫೋನ್ ಟ್ರ್ಯಾಕ್ ಮಾಡುತ್ತೇವೆ ಎಂದಿದ್ದರು. ನಿನ್ನೆ ರಾತ್ರಿ ನೂರಾರು ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ ನಮ್ಮ ಹುಡುಗಿಯ ಮದುವೆ ಮಾಡಲು ಸಿದ್ದವಾಗಿದ್ದೆವು. ಆದರೆ, ಆ ಯುವಕ ಬೇರೆ ಬೇರೆ ಕೆಟ್ಟಚಟಗಳಿಗೆ ದಾಸನಾಗಿದ್ದು ತಿಳಿಯಿತು. ಆದ್ದರಿಂದ ನಮ್ಮ ಹುಡುಗಿ ಆತ ಬೇಡ ಎಂದಿದ್ದಳು. ಈ ಹಿನ್ನೆಲೆಯಲ್ಲಿ ದ್ವೇಷ ಸಾಧಿಸುತ್ತಿದ್ದಾನೆ. ಆರೋಪಿಯ ಹೆಸರು ಅಶೋಕ ತಮ್ಮೇಗೌಡ'' ಎಂದು ವೆಂಕಟೇಶ್ ಆರೋಪಿಸಿದರು.

''ನಾವು ರಾತ್ರಿ ವೇಳೆ ಈ ಭಾಗದಲ್ಲಿ ತಿರುಗಾಡುತ್ತಿರುತ್ತೇವೆ. ಮುಂದೆ ನಮಗೇನಾದರೂ ತೊಂದರೆ ಕೊಡಬಹುದು. ಪೊಲೀಸರಿಗೆ ದೂರು ನೀಡಿದ್ದೆವು. ಅವರು ಸಕಾಲದಲ್ಲಿ ಕ್ರಮ ತೆಗೆದುಕೊಂಡಿದ್ದರೆ, ಈ ರೀತಿ ಆಗುತ್ತಿರಲಿಲ್ಲ. ನಾವು ಠಾಣೆಗೆ ಹೋಗಿ ವಿಚಾರಿಸಿದ್ದೆವು. ಪೊಲೀಸರು ಸಾಕ್ಷಿ ಸಿಗುವತನಕ ಏನೂ ಮಾಡಲಾಗದು. ಫೋನ್ ಮೊಬೈಲ್​ ಟ್ರ್ಯಾಕ್​ಗೆ ಹಾಕಿದ್ದೀವಿ, ನೋಡೋಣ ಕಾಯಿರಿ ಎಂದು ಹೇಳುತ್ತಾರೆ'' ಎಂದು ಅವರು ಅಳಲು ತೋಡಿಕೊಂಡರು.

ಘಟನಾ ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಮಾತನಾಡಿ, ''ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ದುಷ್ಕರ್ಮಿಗಳು ಈ ರೀತಿ ಮನಬಂದಂತೆ ಹಾಳು ಮಾಡಿದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಆರೋಪಿಗಳನ್ನು ಪತ್ತೆ ಹಚ್ಚಿ, ತಕ್ಕ ಶಿಕ್ಷೆ ಕೊಡಬೇಕು'' ಎಂದು ಆಗ್ರಹಿಸಿದರು.

ಇದನ್ನೂ ಓದಿ: ಆನೇಕಲ್​ನಲ್ಲಿ ಕಾಡಾನೆಗಳ ಹಾವಳಿ.. ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಗಜಪಡೆ

Last Updated : Aug 10, 2023, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.