ಮೈಸೂರು: ನಗರದ ಹುಣಸೂರು ರಸ್ತೆಯ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿರುವ ಸಂಸದ ಪ್ರತಾಪ್ ಸಿಂಹರ ಕಚೇರಿ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬಳೆಗಳನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ತನ್ವೀರ್ ಸೇಠ್ ಬಗ್ಗೆ ಪ್ರತಾಪ್‌ಸಿಂಹ ಲೇವಡಿ ಮಾಡಿರುವ ವಿಚಾರವಾಗಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು, ತನ್ವೀರ್ ಸೇಠ್ ಸೇರಿದಂತೆ ಕಾಂಗ್ರೆಸ್ ನಾಯಕರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಕೊರೊನಾ ಸಂಕಷ್ಟದಲ್ಲಿ ಜನ ಸಾಯುತ್ತಿರುವಾಗ ನಿಮಗೆ ಕೋಮುವಾದ ಬೇಕಾ?ಪ್ರಚೋದನೆ ಮಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಹೆಣ್ಣಿಗೆ ಗೌರವ ಕೊಡುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಮೈಸೂರು ಜನ ನಿಮ್ಮ ರಾಸಲೀಲೆಗಳನ್ನು ನೋಡಿದ್ದಾರೆ. ನೀವು ಏನೆಂಬುದು ಜನರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಮ್ಮ ಮನವಿಗೆ ಸ್ಪಂದಿಸದಿದ್ರೆ, ಜನಾಂದೋಲನದ ಮೂಲಕ ಉತ್ತರ ಕೊಡ್ತೀವಿ: ಪ್ರತಾಪ್ ಸಿಂಹ