ಮೈಸೂರು: ಇನ್ನೂ 10 ದಿನಗಳ ಕಾಲ ಅವಕಾಶ ಇರುವುದರಿಂದ ಪೂರ್ವಭಾವಿ ತಯಾರಿ ಕಷ್ಟ. ಯೋಗ ದಾಖಲೆಗೆ ಮುಂದಿನ ವರ್ಷ ಪಯತ್ನ ಮಾಡೋಣ ಎಂದು ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡುವ ಮೂಲಕ ಈ ವರ್ಷ ವಿಶ್ವ ದಾಖಲೆಯ ಯೋಗ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶ್ವ ಯೋಗ ದಿನದ ಪೂರ್ವಭಾವಿ ಸಭೆ ನಡೆಸಿದ ಸಚಿವ ಸಾ.ರಾ.ಮಹೇಶ್, ಈ ವರ್ಷ 1.25 ಲಕ್ಷ ಯೋಗ ಪಟುಗಳನ್ನು ಸೇರಿಸಲು ಕಾಲಾವಕಾಶ ಕಡಿಮೆ ಇದ್ದು, ಇದರಿಂದ ದಾಖಲೆಗಾಗಿ ಈ ವರ್ಷ ಯೋಗ ಇರುವುದಿಲ್ಲ. ಜೂನ್ 21ರಂದು ಎಲ್ಲರೂ ಒಟ್ಟಾಗಿ ಯೋಗ ಮಾಡೋಣ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಇಂದು ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ತಂದು ಕೊಟ್ಟವರು ಪ್ರಧಾನಿ ನರೇಂದ್ರ ಮೋದಿಯವರು. 2005ರಿಂದ ಇಲ್ಲಿಯವರೆಗೆ ಮೈಸೂರಿನಲ್ಲಿ ವಿಶ್ವ ಯೋಗ ದಿನ ಆಚರಿಸಿಕೊಂಡು ಬಂದಿದ್ದೇವೆ.
2015 -2016ರಲ್ಲಿ 10,000, 2017ರಲ್ಲಿ 55,000 ಜನ ಸೇರಿ ಯೋಗ ಮಾಡಿ ಗಿನ್ನಿಸ್ ದಾಖಲೆ ಮಾಡಲಾಗಿತ್ತು. ನಂತರ ಕಳೆದ ವರ್ಷ 60,000 ಜನ ಸೇರಿ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ನಗರದ ರೇಸ್ ಕೋರ್ಸ್ ಮೈದಾನದಲ್ಲಿ ನಡೆಸಲಾಗಿತ್ತು. ಈ ಬಾರಿ 1 ಲಕ್ಷ ಜನ ಸೇರಿಸಿ ಯೋಗ ಮಾಡುವ ಆಶಯ ಇದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.