ಮೈಸೂರು: ತೀವ್ರ ಅನಾರೋಗ್ಯದ ಕಾರಣ ಸೆಪ್ಟೆಂಬರ್ 08 ರಂದು ನಿಧನ ಹೊಂದಿದ ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ಗೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಳೆಯ ವಿಡಿಯೋವನ್ನು ಹಂಚಿ ಸಂತಾಪ ಸೂಚಿಸಿದ್ದಾರೆ.
- " class="align-text-top noRightClick twitterSection" data="">
ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನಿನ್ನೆ ಅನಾರೋಗ್ಯ ಕಾರಣದಿಂದ ನಿಧನ ಹೊಂದಿದ್ದು ಹಳೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. 1950 ದಶಕದ ಉತ್ತರಾರ್ಧದಲ್ಲಿ ರಾಣಿ ಎರಡನೇ ಎಲಿಜಬೆತ್ ಬೆಂಗಳೂರಿಗೆ ಬಂದಿದ್ದರು. ಅಂದಿನ ರಾಜ್ಯಪಾಲರು ಹಾಗೂ ಮಾಜಿ ಮಹರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಭೇಟಿಯಾಗಿದ್ದರು. ಅಂದಿನ ಕ್ಷಣಗಳನ್ನು ಯದುವೀರ್ ಒಡೆಯರ್ ಇಂದು ನೆನಪಿಸಿಕೊಂಡಿದ್ದಾರೆ.
ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಅವರು ಬೆಂಗಳೂರಿಗೆ ಭೇಟಿ ನೀಡಿ ನನ್ನ ಅಜ್ಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ಸುತ್ತಾಡಿದ್ದು, ನಮಗೆ ನೆನಪಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗಣೇಶ ನಿಮಜ್ಜನಕ್ಕೆ ನಿಯೋಜಿಸಿದ್ದ ಹೆಡ್ ಕಾನ್ಸ್‌ಟೇಬಲ್‌ಗೆ ಲಾಡ್ಜ್‌ನಲ್ಲಿ ಹೃದಯಾಘಾತ, ಸಾವು: ಸಿಸಿಟಿವಿ ದೃಶ್ಯ